News @ your fingertips
News @ your fingertips
ಎಪ್ರಿಲ್ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಅಲ್ಪ ಮಟ್ಟದಲ್ಲಿ ಕಡಿಮೆಯಾಗಿದೆ.
ಮಾರ್ಚ್‌ನಲ್ಲಿ ಶೇ.4.85ರಷ್ಟಿದ್ದ ಹಣದುಬ್ಬರ ಎಪ್ರಿಲ್‌ಗೆ ಶೇ.4.83ಕ್ಕೆ ಇಳಿದಿದೆ. ತೈಲ ದರದಲ್ಲಿನ ಕುಸಿತದಿಂದ ಈ ಚೇತರಿಕೆಯಾಗಿದೆ.
ಆದರೆ ಆಹಾರ ಹಣದುಬ್ಬರ ಏರಿಕೆ ಕಂಡಿದೆ. ಮಾರ್ಚ್‌ನಲ್ಲಿ ಶೆ.8.52ರಷ್ಟಿದ್ದು , ಎಪ್ರಿಲ್‌ಗೆ ಶೇ.8.70ಕ್ಕೆ ಜಿಗಿದಿದೆ. ಮಾಂಸ, ಮೀನು, ಹಣ್ಣು ಹಂಪಲುಗಳ ದರ ಹೆಚ್ಚಳವಾಗಿರುವುದು ಇದಕ್ಕೆ ಕಾರಣವಾಗಿದೆ. ಆದರೆ ತರಕಾರಿ, ಸಕ್ಕರೆ, ಸಂಬಾರ ಪದಾರ್ಥಗಳ ಹಣದುಬ್ಬರ ಇಳಿಕೆಯಾಗಿದೆ.
ಮಾರ್ಚ್‌ನಲ್ಲಿ ಶೇ.3.38ರಷ್ಟಿದ್ದ ಹಾಲು ಮತ್ತು ಅದರ ಉತ್ಪನ್ನಗಳ ಹಣದುಬ್ಬರ ಎಪ್ರಿಲ್‌ನಲ್ಲಿ ಶೇ.2.97ಕ್ಕೆ ಇಳಿದಿದೆ.
ಹಿಂದಿನ ತಿಂಗಳು ಶೇ.11.7ರಷ್ಟಿದ್ದ ಖಾದ್ಯತೈಲದ ಹಣದುಬ್ಬರ ಎಪ್ರಿಲ್‌ಗೆ ಶೇ.9.43ಕ್ಕೆ ಕುಸಿದಿದೆ ಎಂದು ಕೇಂದ್ರ ಸರಕಾರ ಅಂಕಿ-ಅಂಶ ಸಚಿವಾಲಯದ ಪ್ರಕಟನೆ ತಿಳಿಸಿದೆ
More Stories
ಹೊಸ ಲುಕ್ ಅಂಬಾಸಿಡರ್ ಹೊಸ ವರ್ಷಕ್ಕೆ
ರಿಲಯನ್ಸ್ ಇನ್ಫ್ರಾ , ಪವರ್ ಷೇರುಗಳು ಏರಿಕೆ
ಭಾರತದಲ್ಲಿ ಜೇನ್ ಸ್ಟ್ರೀಟ್ ವಹಿವಾಟು ನಿಷೇಧ