7 rupees

News @ your fingertips

ಕ್ರೇಜಿವಾಲ್ ಜೈಲಿನಿಂದ ಹೊರಗೆ

ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಸುಪ್ರೀಂಕೋರ್ಟ್ ಮಧ್ಯಂತರ ಜಾಮೀನು ನೀಡಿದೆ.
ಶುಕ್ರವಾರ ಸಂಜೆ ಅವರು ಜೈಲಿನಿಂದ ಬಿಡುಗಡೆಯಾಗಿದ್ದಾರೆ.ದೆಹಲಿ ಅಬಕಾರಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಕೇಸಿನಲ್ಲಿ ಇಡಿ ಕ್ರೇಜಿವಾಲ್ ಅವರನ್ನು ಬಂಧಿಸಿತ್ತು.ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಅವರ ಬಂಧನವಾದ ಕಾರಣ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಲು ಸಾಧ್ಯವಾಗಿರಲಿಲ್ಲ. ಇದು ಅಪ್‌ಅದ್ಮಿ ಪಕ್ಷಕ್ಕೆ ದೊಡ್ಡ ಹೊಡೆತವನ್ನು ನೀಡಿತ್ತು. ಸದ್ಯ ಜಾಮೀನು ಮೇಲೆ ಬಿಡುಗಡೆಯಾಗಿರುವುದು ಸ್ವಲ್ಪ ನಿರಾಳತೆಯನ್ನುಂಟು ಮಾಡಿದೆ.
ಅದರೆ ಸರಕಾರಿ ಕಚೇರಿಗೆ ಹೋಗುವುದು, ಕಡತಗಳಿಗೆ ಸಹಿ ಮಾಡುವುದನ್ನು ಕೋರ್ಟ್ ನಿರ್ಬಂಧಿಸಿದೆ. ತುರ್ತು ಸಂದರ್ಭಗಳಲ್ಲಿ ರಾಜ್ಯಪಾಲರ ಅನುಮತಿ ಪಡೆದು ಆದೇಶಗಳನ್ನು ಹೊರಡಿಸಲು ಅವಕಾಶ ನೀಡಿದೆ,

.