7 rupees

News @ your fingertips

ಕೋಟಕ್ ಮಹೀಂದ್ರ ಬ್ಯಾಂಕ್ ಲಾಭ ಶೇ.18ರಷ್ಟು ಏರಿಕೆ

ಖಾಸಗಿ ರಂಗದಲ್ಲಿ ಮುಂಚೂಣಿಯಲ್ಲಿರುವ ಕೋಟಕ್ ಮಹೀಂದ್ರ ಬ್ಯಾಂಕ್ ಆರ್ಥಿಕ ವರ್ಷದ ಕೊನೆಯ ಅವಧಿಯಲ್ಲಿ 4133 ಕೋ.ರೂ. ಲಾಭ ದಾಖಲಿಸಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ಬ್ಯಾಂಕ್ 3496 ಕೋ.ರೂ. ಲಾಭ ಪಡೆದಿದ್ದು , ಈ ಬಾರಿ ಲಾಭ ಶೇ.18ರಷ್ಟು ಏರಿಕೆ ಕಂಡಿದೆ.
ಹಿಂದಿನ ಸಾಲಿನಲ್ಲಿ ನಿವ್ವಳ ಬಡ್ಡಿ ಅದಾಯ 6103 ಕೋ.ರೂ.ಗಳಿದ್ದು , ಅದು ಈ ಬಾರಿ 6909 ಕೋ.ರೂ.ಗಳಾಗಿದ್ದು , ಶೇ.13ರಷ್ಟು ಹೆಚ್ಚಳವಾಗಿದೆ.
ಬ್ಯಾಂಕ್ ಕಳೆದ ವರ್ಷ 3.25 ಲಕ್ಷ ಕೋಟಿ ರೂ. ಸಾಲ ನೀಡಿದ್ದು , ಈ ಅವಧಿಯಲ್ಲಿ ಶೇ.20ರಷ್ಟು ಪ್ರಗತಿ ಸಾಧಿಸಿದ್ದು , 3.91 ಲಕ್ಷ ಕೋಟಿ ರೂ.ಗಳಿಗೆ ಏರಿದೆ.

× Subscribe us