7 rupees

News @ your fingertips

ಕೋಟಕ್ ಬ್ಯಾಂಕ್ ಜೆಎಂಡಿ ರಾಜೀನಾಮೆ

ಕೋಟಕ್ ಮಹೀಂದ್ರ ಬ್ಯಾಂಕಿನ ಜಂಟಿ ಅಡಳಿತ ನಿರ್ದೇಶಕ ಕೆ ವಿ ಸುಬ್ರಹ್ಮಣ್ಯನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಕೋಟಕ್ ಮಹೀಂದ್ರ ಬ್ಯಾಂಕ್‌ನ ಜಂಟಿ ಅಡಳಿತ ನಿರ್ದೇಶಕ ಸ್ಥಾನಕ್ಕೆ ತಾನು ತಕ್ಷಣ ಜಾರಿ ಬರುವಂತೆ ರಾಜೀನಾಮೆ ನೀಡಿದ್ದೇನೆ. ವಿತ್ತೀಯ ಕ್ಷೇತ್ರ ಬೇರೆ ಅವಕಾಶಗಳಿಗಾಗಿ ಈ ನಿರ್ಧಾರವನ್ನು ಕೈಗೊಂಡಿದ್ದೇನೆ ಎಂದು ಅವರು ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
ಕೃಷ್ಣನ್ ವೆಂಕಟ್ ಸುಬ್ರಹ್ಮಣ್ಯನ್ ಕೇವಲ ಜಂಟಿ ಅಡಳಿತ ನಿರ್ದೇಶಕರಲ್ಲದೇ, ಬ್ಯಾಂಕಿನ ಪೂರ್ಣಾವಧಿ ನಿರ್ದೇಶಕರೂ ಆಗಿದ್ದರು. ಈ ಎರಡು ಹುದ್ದೆಗಳಿಂದ ತಾನು ನಿರ್ಗಮಿಸುತ್ತಿರುವುದಾಗಿ ಅವರು ಹೇಳಿದ್ದಾರೆ.

 

× Subscribe us