News @ your fingertips
News @ your fingertips
ಕೆನಡಾಕ್ಕೆ ಅಧಿಕ ಪ್ರಮಾಣದಲ್ಲಿ ಬರುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯನ್ನು ನಿಯಂತ್ರಿಸಲು ಅಲ್ಲಿನ ಸರಕಾರ ಮುಂದಾಗಿದೆ.
ಇದು ವಿದ್ಯಾರ್ಥಿಗಳ ಪಾಲಿಗೆ ಸ್ವಲ್ಪ ಕಹಿ ಸುದ್ದಿ.
ಕೆನಡಾದಲ್ಲಿ ಅತ್ಯುತ್ತಮ ಗುಣಮಟ್ಟದ ಹಾಗೂ ಹೆಚ್ಚು ವೆಚ್ಚದಾಯಕವಲ್ಲದ ಶಿಕ್ಷಣ ದೊರೆಯುತ್ತದೆ ಎನ್ನುವ ಕಾರಣ , ಅಲ್ಲಿಗೆ ಹಾರಲು ವಿದ್ಯಾರ್ಥಿಗಳು ಹಾತೊರೆಯುತ್ತಾರೆ. ವರ್ಷದಿಂದ ವರ್ಷಕ್ಕೆ ವಿಶ್ವದಾದ್ಯಂತದಿಂದ ಕೆನಡಾಕ್ಕೆ ಹೋಗುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಶಿಕ್ಷಣಪಡೆದ ಬಳಿಕ ಹಲವರು ಅವರವರ ದೇಶಗಳಿಗೆ ಮರಳಿದರೆ , ಮತ್ತೆ ಹಲವು ಅಲ್ಲೇ ಉದ್ಯೋಗ ಪಡೆದು ನೆಲೆಸಲು ಬಯಸುತ್ತಾರೆ. ಹಾಗಾಗಿ ಅಲ್ಲಿನ ಸರಕಾರ ಈ ಪರ್ಮಿಟ್‌ಗೆ ಮಿತಿ ಹಾಕಲು ಮುಂದಾಗುತ್ತಿದೆ.
ಶೈಕ್ಷಣಿಕ ಪರ್ಮಿಟ್ ಮೇಲೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ, ಅದಕ್ಕೆ ಮಿತಿ ವಿಧಿಸುವ ಚಿಂತನೆ ಇದೆ ಎಂದು ಕೆನಡಾದ ಇಮಿಗ್ರೇಷನ್, ಸಿಟಿಜನ್‌ಶಿಪ್ ಸಚಿವ ಮ್ಯಾಕ್ ಮಿಲ್ಲರ್ ತಿಳಿಸಿದ್ದಾರೆ.
ಈ ಹಿಂದಿನ ವರ್ಷಗಳಲ್ಲಿ ನೀಡಿರುವ ಶೈಕ್ಷಣಿಕ ಪರ್ವಿಟ್‌ಗಳಲ್ಲಿ ಖಾಲಿಯಾಗುವ ಪರ್ವಿಟ್‌ಗಳನ್ನು ಮಾತ್ರ ಈ ವರ್ಷ ವಿತರಿಸುವ ಬಗ್ಗೆ ಚಿಂತನೆ ನಡೆದಿದೆ. ಅಂದರೆ 2024ರ ಸಾಲಿನಲ್ಲಿ ಹಿಂದಿನ ವರ್ಷದಂತೆ ಒಟ್ಟು ಸುಮಾರು 485000 ಶೈಕ್ಷಣಿಕ ಪರ್ಮಿಟ್ ಸಿಗುವ ಸಾಧ್ಯತೆಗಳಿವೆ.
ಪ್ರತಿ ವರ್ಷ ಸುಮಾರು ಶೇ 20ರಷ್ಟು ವಿದ್ಯಾರ್ಥಿಗಳು ಮಕ್ಕಳು ಶೆಕ್ಷಣಿಕ ಪರ್ಮಿಟ್‌ನಲ್ಲಿ ಅಲ್ಲೇ ಮುಂದುವರಿಸಲು ಬಯಸುತ್ತಾರೆ. ಈ ಬಾರಿ ಸುಮಾರು 95 ಸಾವಿರ ವಿದ್ಯಾರ್ಥಿಳು ಉಳಿದುಕೊಳ್ಳುವ ನಿರೀಕ್ಷೆ ಇದೆ. ಹಾಗಾಗಿ ಸುಮಾರು 364000 ವಿದ್ಯಾರ್ಥಿಗಳಿಗೆ ಈ ಬಾರಿ ಹೊಸ ಶೈಕ್ಷಣಿಕ ಪರ್ಮಿಟ್ ನೀಡಲು ಸಾಧ್ಯವಾಗಬಹುದು ಎಂದು ಸಚಿವರು ವಿವರಿಸಿದ್ದಾರೆ.
2024ರಲ್ಲಿ ಸುಮಾರು 6 ಲಕ್ಷ ವಿದ್ಯಾರ್ಥಿಗಳಿಂದ ಶೈಕ್ಷಣಿಕ ಪರ್ಮಿಟ್‌ಗಾಗಿ ಅರ್ಜಿಗಳು ಬಂದಿವೆ. ಅವುಗಳಲ್ಲಿ ಶೇ.60ರಷ್ಟು ಮಾತ್ರ ಅನುಮತಿ ದೊರೆಯುವ ಸಾಧ್ಯತೆ ಇದೆ.
ಪ್ರಾಥಮಿಕ , ಹೈಸ್ಕೂಲು ಮತ್ತು ಉತನ್ನ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಹೆಚ್ಚಿನ ನಿರ್ಬಂಧಗಳನ್ನು ವಿಧಿಸಲಾಗುತ್ತಿಲ್ಲ.
More Stories
ಮಿಡ್, ಸ್ಮಾಲ್ ಕ್ಯಾಪ್ ಸ್ಟಾಕ್ಗಳ ಕಥೆಯೇನು ?
ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ
ಮೋದಿ -ಟ್ರಂಪ್ ಭೇಟಿ , ಭಾರತಕ್ಕೆ ಲಾಭ