News @ your fingertips
News @ your fingertips
ರಿಲಯನ್ಸ್ ಇಂಡಸ್ಟ್ರಿಯ ಟೆಲಿಕಾಂ ಹಾಗೂ ಇಂಟರ್ನೆಟ್ ಸಹಸಂಸ್ಥೆ ಜಿಯೋ ಮುಂಬರುವ ದಿನಗಳಲ್ಲಿ ಎಐ ತಂತ್ರಜ್ಞಾನವನ್ನು ಬಳಸಿ ಅಭಿವೃದ್ದಿಗೆ ದೊಡ್ಡ ಕೊಡುಗೆ ನೀಡಲು ಸಿದ್ದವಾಗಿದೆ.
ರಿಲಯನ್ಸ್ ಇಂಡಸ್ಟ್ರಿಯ 47ನೇ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಂಪೆನಿಯ ಸಿಎಂಡಿ ಮುಕೇಶ್ ಅಂಬಾನಿ , ಕೃತಕ ಬುದ್ದಿಮತ್ತೆ ತಂತ್ರಜ್ಞಾನ ( ಎಐ ) ರಿಲಯನ್ಸ್ನ ಅಭಿವೃದ್ದಿಯ ಮಹತ್ತರ ಭಾಗವಾಗಿದೆ. ಜಿಯೋ ಮುಂದಿನ ದಿನಗಳಲ್ಲಿ ಈ ಹೊಸ ತಂತ್ರಜ್ಞಾನ ಬಳಸಿ ಕೃಷಿ , ಶಿಕ್ಷಣ , ಆರೋಗ್ಯ ಹಾಗೂ ಸಣ್ಣ ಕೈಗಾರಿಕಾ ಕ್ಷೇತ್ರಗಳಲ್ಲಿ ಮಹತ್ತರ ಪಾತ್ರ ವಹಿಸಲಿದೆ ಎಂದು ವಿವರಿಸಿದರು.
ಕೃಷಿ:
ಎಐ ತಂತ್ರಜ್ಞಾನದ ಮೂಲಕ ಕೃಷಿ ಕ್ಷೇತ್ರದಲ್ಲಿ ರೈತರಿಗೆ ಅನುಕೂಲವಾಗುವ ಪರಿಕರಗಳನ್ನು ಒದಗಿಸಲಿದೆ. ವಾತಾವರಣ ಕುರಿತಂತೆ ನಿಖರ ಮಾಹಿತಿ , ರೋಗ ನಿರ್ವಹಣೆ ಕುರಿತ ವಿವರಣೆ ಮುಂತಾದ ಹಲವು ನೆರವುಗಳನ್ನು ಸಕಾಲದಲ್ಲಿ ರೈತರಿಗೆ ಒದಗಿಸುವ ಕಾರ್ಯ ನಿರ್ವಹಿಸಲಿದೆ.
ಶಿಕ್ಷಣ:
ದೇಶಾದ್ಯಂತ ಇರುವ ಮಕ್ಕಳಿಗೆ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಕುರಿತಂತೆ ವಿವರಗಳನ್ನು ಒದಗಿಸಲಾಗುವುದು. ವಿಶ್ವ ಮಟ್ಟದ ಕೌಶಲ್ಯ ಹೊಂದಿರುವ ಪ್ರತಿಭೆಗಳನ್ನು ರೂಪಿಸುವ ನಿಟ್ಟಿನಲ್ಲಿ ಹೊಸ ಕಾರ್ಯಕ್ರಮಗಳನ್ನು ರೂಪಿಸಲಾಗುವುದು.
ಆರೋಗ್ಯ :
ರೋಗಿಗಳಲ್ಲಿ ನಿಖರವಾಗಿ ರೋಗ ಗುರುತಿಸುವುದು. ಪ್ರಾಥಮಿಕ ಹಂತದಲ್ಲೇ ಕ್ಲಿಷ್ಟಕರವಾಗಿರುವ ರೋಗಗಳನ್ನು ಪತ್ತೆ ಹಚ್ಚುವುದು.ಅವುಗಳಿಗೆ ಸಮರ್ಪಕವಾದ ಚಿಕಿತ್ಸೆ ಒದಗಿಸುವುದು , ಪ್ರತಿಯೊಬ್ಬ ರೋಗಿಗೂ ವೈಯಕ್ತಿಕವಾದ ಆರೋಗ್ಯ ಯೋಜನೆಯನ್ನು ರೂಪಿಸಿಕೊಡುವುದು ಮುಂತಾದ ಹಲವು ಚಟುವಟಿಕೆಗಳನ್ನು ರೂಪಿಸಲಾಗುವುದು.
ಉದ್ಯಮ :
ಸಣ್ಣ ಕೈಗಾರಿಕೆಗಳಿಗೆ ಬೇಕಾಗುವ ಮಾಹಿತಿ , ತಂತ್ರಜ್ಞಾನ ಸಹಕಾರ , ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯಮವನ್ನು ಜಾಗತಿಕ ಮಟ್ಟಕ್ಕೆ ಕಂಡು ಹೋಗುವ ನೈಪುಣ್ಯತೆ ಮುಂತಾಹ ಹಲವು ಪರಿಕರಗಳನ್ನು ಎಐ ಮೂಲಕ ಜಿಯೋ ಒದಗಿಸಲಿದೆ ಎಂದು ಮುಕೇಶ್ ಅಂಬಾನಿ ವಿವರಿಸಿದರು.
More Stories
ಹೊಸ ಲುಕ್ ಅಂಬಾಸಿಡರ್ ಹೊಸ ವರ್ಷಕ್ಕೆ
ರಿಲಯನ್ಸ್ ಇನ್ಫ್ರಾ , ಪವರ್ ಷೇರುಗಳು ಏರಿಕೆ
ಭಾರತದಲ್ಲಿ ಜೇನ್ ಸ್ಟ್ರೀಟ್ ವಹಿವಾಟು ನಿಷೇಧ