News @ your fingertips
News @ your fingertips
ದೇಶದ ಹಣದುಬ್ಬರ ದರ ಕಳೆದ 5 ತಿಂಗಳಲ್ಲಿ ಇದೇ ಮೊದಲ ಬಾರಿಗೆ ಇಳಿಕೆಯಾಗಿದೆ.
ಡಿಸೆಂಬರ್ ತಿಂಗಳಲ್ಲಿ ಶೇ.5.22ರಷ್ಟಿದ್ದ ಹಣದುಬ್ಬರ ಶೇ.4.31ಕ್ಕೆ ಇಳಿದಿದೆ.
ಗ್ರಾಮೀಣದ ಪ್ರದೇಶಗಳಲ್ಲಿ ಶೇ. 5.76 ರಷ್ಟಿದ್ದ ಹಣದುಬ್ಬರ ಶೇ.4.64ಕ್ಕೆ ಇಳಿಮುಖವಾದರೆ ನಗರ ಪ್ರದೇಶದಲ್ಲಿ ಶೇ.4.58ರಿಂದ ಶೇ.3.87ಕ್ಕೆ ಕುಸಿದಿದೆ.
ಗ್ರಾಹಕ ದರ ಸೂಚ್ಯಂಕದಲ್ಲಿ ಸುಮಾರು ಅರ್ಧದಷ್ಟು ಪಾಲು ಹೊಂದಿರುವ ಆಹಾರ ಹಣದುಬ್ಬರವೂ ಈ ಬಾರಿ ಕಡಿತಗೊಂಡಿರುವುದು ಹೆಚ್ಚಿನ ಪರಿಣಾಮವನ್ನು ಬೀರಿದೆ. ಡಿಸೆಂಬರ್‌ನಲ್ಲಿ ಶೇ.8.39ರಷ್ಟು ಇದ್ದ ಅಹಾರ ಹಣದುಬ್ಬರ ಜನವರಿಗೆ ಶೇ.6.02ಕ್ಕೆ ಇಳಿದಿದೆ.
ಕಳೆದ ಡಿಸೆಂಬರ್‌ಗೆ ಹೋಲಿಸಿದರೆ ತರಕಾರಿ ಬೆಲೆಗಳು ವರ್ಷದಿಂದ ವರ್ಷಕ್ಕೆ ಶೇ.11.35ರಷ್ಟು ಏರಿಕೆಯನ್ನು ಕಂಡಿದ್ದವು. ಅದರೆ ಜನವರಿ ಹೊತ್ತಿಗೆ ಚಳಿಗಾಲದ ಹೊಸ ಆಹಾರೋತ್ಪನ್ನಗಳು ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಂದಿರುವ ಕಾರಣ ಬೆಲೆಯಲ್ಲಿ ಇಳಿಮುಖವಾಗಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇತ್ತೀಚಿಗೆ 2025-26ರ ಅರ್ಥಿಕ ವರ್ಷದಲ್ಲಿ ಭಾರತದ ಹಣದುಬ್ಬರ ದರ ಸುಮಾರು ಶೇ.4.2ಕ್ಕೆ ಇಳಿಯುವ ಸಾಧ್ಯತೆಗಳನ್ನು ಅಂದಾಜಿಸಿತ್ತು . ಇದೇ ಹೊತ್ತಿಗೆ ಅರ್‌ಬಿಐ ಸುಮಾರು 5 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಶೇ. 0.25 ಬಡ್ಡಿದರ ಕಡಿತ ಮಾಡಿತ್ತು.
ಕಳೆದ ಒಂದು ವರ್ಷದಲ್ಲಿ ಜಗತ್ತಿನ ಅಸ್ಥಿರ ಅರ್ಥಿಕತೆ, ದುರ್ಬಲಗೊಂಡ ರೂಪಾಯಿ ಮೌಲ್ಯ, ವಿದೇಶಿ ಹೂಡಿಕೆಯಲ್ಲಿ ಕುಸಿತ , ತಳಮಟ್ಟದ ಅರ್ಥಿಕ ಅಸ್ಥಿರತೆ ,ಅನಿಶ್ಚಿತವಾಗಿದ್ದ ಜಾಗತಿಕ ರಾಜಕೀಯ ವಿದ್ಯಮಾನಗಳ ನಡುವೆಯೂ ಹಣದುಬ್ಬರ ನಿಯಂತ್ರಿಸಲು ಕೇಂದ್ರ ಸರಕಾರ ಹೆಚ್ಚಿನ ಒತ್ತು ನೀಡಿತ್ತು.
More Stories
ಮಿಡ್, ಸ್ಮಾಲ್ ಕ್ಯಾಪ್ ಸ್ಟಾಕ್ಗಳ ಕಥೆಯೇನು ?
ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ
ಮೋದಿ -ಟ್ರಂಪ್ ಭೇಟಿ , ಭಾರತಕ್ಕೆ ಲಾಭ