7 rupees

News @ your fingertips

ಓಯೋ ಸದ್ಯದಲ್ಲೇ ಷೇರು ಮಾರುಕಟ್ಟೆಗೆ

ಜಾಗತಿಕ ಟ್ರಾವೆಲ್ಸ್ ಟೆಕ್ ಯೂನಿಕಾರ್ನ್ ಓಯೋ ಬರುವ ಜೂನ್‌ನಲ್ಲಿ ತನ್ನ ಐಪಿಒ ಗೆ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ. ಈ ಹಿಂದೆಯೂ ಸಂಸ್ಥೆ ಐಪಿಒ ಹೊರತರಲು ಬಯಸಿದ್ದು ,ಅಂತಿಮ ಕ್ಷಣದಲ್ಲಿ ತನ್ನ ಯೋಜನೆಯನ್ನು ಹಿಂದಕ್ಕೆ ಪಡೆದಿತ್ತು.
ಹೋಟೆಲ್ ರೂಮ್ ಬುಕ್ಕಿಂಗ್‌ನಲ್ಲಿ ಮುಂಚೂಣಿಯಲ್ಲಿರುವ ಓಯೋ ಕಳೆದ ಕೆಲವು ವರ್ಷಗಳಿಂದ ಅರ್ಥಿಕವಾಗಿ ಉತ್ತಮ ಸಾಧನೆಯನ್ನು ತೋರುತ್ತಿದೆ.
ಈ ಬಾರಿ ಐಪಿಒ ಹೊರತರಲು ಎಲ್ಲ ಸಿದ್ದತೆಗಳನ್ನು ಮಾಡಿಕೊಂಡಿರುವ ಸಂಸ್ಥೆ ತನ್ನ ಹೂಡಿಕೆ ಸಂಸ್ಥೆ ಸ್ವಾಫ್ಟ್ ಬ್ಯಾಂಕ್ ಜೊತೆಯಲ್ಲಿ ನೂತನ ಹೂಡಿಕೆದಾರ ಬ್ಯಾಂಕ್‌ಗಳ ಜೊತೆಯಲ್ಲಿ ಜೂನ್‌ನಲ್ಲಿ ಸಭೆ ನಡೆಸಲು ತೀರ್ಮಾನಿಸಿದೆ.
ಸಿಟಿ ಬ್ಯಾಂಕ್ , ಗೋಲ್ಡ್‌ಮನ್ ಸ್ಯಾಚ್ , ಜೆಫ್ರಿ , ಐಸಿಐಸಿ ಸೆಕ್ಯುರಿಟೀಸ್ , ಆಕ್ಸಿಸ್ ಕ್ಯಾಪಿಟಲ್ ಹೊಸದಾಗಿ ಓಯೋ ನಲ್ಲಿ ಹೂಡಿಕೆ ಮಾಡಲು ಆಸಕ್ತವಾಗಿವೆ. ಈ ವಿತ್ತೀಯ ಸಂಸ್ಥೆಗಳ ಜೊತೆಯಲ್ಲಿ ಸ್ವಾಫ್ಟ್ ಬ್ಯಾಂಕ್ ಹಾಗೂ ಓಯೋ ಸಂಸ್ಥೆಯ ಉನ್ನತ ಅಧಿಕಾರಿಗಳು ಹೂಡಿಕೆ ಕುರಿತಂತೆ ಉನ್ನತ ಮಟ್ಟದ ಸಭೆಯೊಂದನ್ನು ಸದ್ಯದಲ್ಲೇ ನಡೆಸಲಿದ್ದಾರೆ.
ಪ್ರವಾಸೋದ್ಯಮದಲ್ಲಿ ಈಗಾಗಲೇ ಉತ್ತಮ ಸಾಧನೆಯನ್ನು ತೋರಿರುವ ಓಯೋ ತನ್ನ ಶೇ.10ರಷ್ಟು ಷೇರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಬಯಸಿದೆ.