7 rupees

News @ your fingertips

ಐಪಿಒ ಗಳ ಭರ್ಜರಿ ಗಳಿಕೆ, ಹೂಡಿಕೆದಾರ ಖುಷ್

ಬರಲಿವೆ ದೊಡ್ಡ ದೊಡ್ಡ ಕಂಪೆನಿಗಳು ಮಾರುಕಟ್ಟೆಗೆ

ಷೇರು ಮಾರುಕಟ್ಟೆ ದಿನದಿಂದ ದಿನಕ್ಕೆ ಗಗನಕ್ಕೇರುವ ಮೂಲಕ ಹೂಡಿಕೆದಾರರಲ್ಲಿ ಹೊಸ ಕುತೂಹಲವನ್ನು ಉಂಟು ಮಾಡಿರುವುದು ಸಹಜ. ಇದೇ ಹೊತ್ತಿನಲ್ಲಿ ಪ್ರಾಥಮಿಕ ಮಾರುಕಟ್ಟೆಯಲ್ಲೂ ಸಾಕಷ್ಟು ಚಟುವಟಿಕೆಯಿಂದ ಕೂಡಿದೆ. ಹೊಸ ಹೊಸ ಐಪಿಒ ಗಳು ಪ್ರಕಟವಾಗುವ ಮೂಲಕ ಮಾರುಕಟ್ಟೆಯಲ್ಲಿ ಹೊಸ ಉತ್ಸಾಹ ತುಂಬಿದೆ.
ಐಪಿಒಗಳಿಂದ ಹಣ ಮಾಡಲು ಸಾಧ್ಯವೇ ? ಎನ್ನುವ ಸಹಜ ಪ್ರಶ್ನೆ ಇದೆ.
ಷೇರು ಮಾರುಕಟ್ಟೆಯಲ್ಲಿ ಹಣ ಮಾಡುವುದು ಕಷ್ಟ. ಅದೊಂದು ಜೂಜು ಅನ್ನೋರೇ ಜಾಸ್ತಿ. ಇಂತಹ ನಕಾರತ್ಮಕ ಅಭಿಮತಗಳ ನಡುವೆಯೂ ಷೇರು ಮಾರುಕಟ್ಟೆ ಪ್ರವೇಶಿಸುವ ಹೂಡಿಕೆದಾರರ ಸಂಖ್ಯೆ ಹೆಚ್ಚುತ್ತಲೇ ಇದೆ.
ಒಂದು ಕಾಲದಲ್ಲಿ ಪ್ರಾಥಮಿಕ ಮಾರುಕಟ್ಟೆಯಲ್ಲಿ ವಿತ್ತೀಯ ಸಂಸ್ಥೆಗಳು ಮಾತ್ರ ಮರೆಯುತ್ತಿದ್ದವು. ಸಾಮಾನ್ಯ ಹೂಡಿಕೆದಾರರು ಐಪಿಒ ಪ್ರಕ್ರಿಯೆಗಳಿಂದ ದೂರ ಇದ್ದದ್ದೇ ಜಾಸ್ತಿ . ಯಾವಾಗ ಐಪಿಒ ಗಳು ಹೂಡಿಕೆಯ 2-3 ಪಟ್ಟು ಲಾಭವನ್ನು ತಂಡು ಕೊಡಲು ಆರಂಭಿಸಿದವೋ , ಸಾಮಾನ್ಯ ಹೂಡಿಕೆದಾರಿಗೂ ನಂಬಿಕೆ ಹುಟ್ಟಿತು. ಅವರು ಹೆಚ್ಚಿನ ಆಸಕ್ತಿಯನ್ನು ತೋರಿಸಲು ಆರಂಭಿಸಿದರು. ಇದರ ಪರಿಣಾಮವೇ ಬಹಳಷ್ಟು ಐಪಿಒ ಗಳಿಗೆ ಭರ್ಜರಿ ಬೇಡಿಕೆ ಕಂಡು ಬರುತ್ತಿದೆ. ಕೆಲವೊಮ್ಮೆ 100 ಪಟ್ಟು ಹೆಚ್ಚು ಬೇಡಿಕೆ ಬರುವುದೂ ಇದೆ.
ಇತ್ತೀಚಿನ ಕೆಲವು ತಿಂಗಳ ವಿದ್ಯಮಾನವನ್ನೇ ಗಮನಿಸಿ , ಬಹಳಷ್ಟು ಐಪಿಒಗಳು ಸಕ್ಸೆಸ್ ಆಗಿವೆ.
ಕಳೆದ ಸೆಪ್ಟೆಂಬರ್ ತಿಂಗಳೊಂದರಲ್ಲೇ ಸುಮಾರು47 ಕಂಪೆನಿಗಳು ಐಪಿಒ ಮೂಲಕ ಮಾರುಕಟ್ಟೆಯನ್ನು ಪ್ರವೇಶಿಸಿವೆ. ಈ ಮೂಲಕ ಸುಮಾರು 16512 ಕೋ.ರೂ.ಗಳನ್ನು ಸಂಗ್ರಹ ಮಾಡಿವೆ.
ಇವುಗಳಲ್ಲಿ ಶೇ.60ರಷ್ಟು ಕಂಪೆನಿಗಳು ಲಿಸ್ಟಿಂಗ್ ಸಂದರ್ಭದಲ್ಲಿ ಉತ್ತಮ ಗಳಿಕೆಯನ್ನು ತಂದು ಕೊಟ್ಟಿವೆ.
ಇದು ಸಾಮಾನ್ಯ ಹೂಡಿಕೆದಾರರಿಗೆ ಮತ್ತಷ್ಟು ಉತ್ಸಾಹವನ್ನು ತುಂಬಿದೆ.
ಮುಂದಿನ ಕೆಲವು ತಿಂಗಳಲ್ಲಿ ಸಾಲು ಸಾಲು ಐಪಿಒ ಗಳು ಮಾರುಕಟ್ಟೆ ಕದ ತಟ್ಟಲಿವೆ. ಷೇರು ಮಾರುಕಟ್ಟೆ ಈಗ ಶಿಖರ ಸ್ಥಿತಿಯಲ್ಲಿದ್ದು ,ಅದನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಕಂಪೆನಿಗಳು ಭರ್ಜರಿ ಸಿದ್ದತೆಯನ್ನು ಮಾಡಿಕೊಂಡಿವೆ.
ಮುಂದಿನ ದಿನಗಳಲ್ಲಿ ರಿಲಯನ್ಸ್ ರಿಟೇಲ್ , ಒಎನ್‌ಜಿಸಿ ಎನರ್ಜಿ , ಎನ್‌ಟಿಪಿಸಿ ಎನರ್ಜಿ ಮುಂತಾದ ಪ್ರಮುಖ ಐಪಿಒಗಳು ಬರುವ ಸಿದ್ದತೆಯಲ್ಲಿವೆ.
ಒಟ್ಟಿನಲ್ಲಿ ಹೂಡಿಕೆದಾರರು ಖುಷಿಯಲ್ಲಿರುವಂತೆ ಕಾಣುತ್ತದೆ.

.

× Subscribe us