7 rupees

News @ your fingertips

ಏರ್ ಇಂಡಿಯಾ ಸುರಕ್ಷತೆ ಕೊರತೆ ಇಲ್ಲ


ಅಹಮದಾಬಾದ್‌ನಲ್ಲಿ ಕಳೆದ ವಾರ ಸಂಭವಿಸಿದ ವಿಮಾನ ಅಪಘಾತದ ನಂತರ ವಾಯುಯಾನ ನಿಯಂತ್ರಣಾ ಮಂಡಳಿ ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಕಾರ್ಯಾಚರಣೆಯನ್ನು ಪರಿಶೀಲಿಸಿದೆ. ಬೋಯಿಂಗ್ 787 ವಿಮಾನಗಳ ಸುರಕ್ಷತೆ ಕುರಿತಂತೆ ಅದು ಯಾವುದೇ ಆತಂಕವನ್ನು ಬಹಿರಂಗಪಡಿಸಿಲ್ಲ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ ಮಂಗಳವಾರ ಸ್ಪಷ್ಟಪಡಿಸಿದೆ.
ಏರ್ ಇಂಡಿಯಾ 787 ವಿಮಾನ ಮತ್ತು ಸಂಬಂಧಿತ ನಿರ್ವಹಣಾ ವ್ಯವಸ್ಥೆಗಳು ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿದೆ ಎಂದು ಅದು ಹೇಳಿದೆ.
ಏರ್ ಇಂಡಿಯಾದಲ್ಲಿನ ವಿಮಾನಗಳ ನಿರ್ವಹಣೆ ಸಂಬಂಧಿಸಿದಂತೆ ಸಂಸ್ಥೆಯ ಅಂತರಿಕ ಇಲಾಖೆಗಳ ನಡುವೆ ಸಮನ್ವಯ ಹೆಚ್ಚಿಸಲು ನಿರ್ದೇಶನ ನೀಡಿದೆ ಎಂದು ವಿವರಿಸಿದೆ.
ಅಹಮದಾಬಾದ್ ದುರಂತದ ನಂತರ ಜೂನ್ 12 ಮತ್ತು ಜೂನ್ 17 ರ ನಡುವೆ ಬೋಯಿಂಗ್ 787 ನೊಂದಿಗೆ ಕಾರ್ಯನಿರ್ವಹಿಸಬೇಕಿದ್ದ 66 ವಿಮಾನಗಳನ್ನು ಏರ್ ಇಂಡಿಯಾ ರದ್ದುಗೊಳಿಸಿದೆ ಎಂದು ಹೇಳಿದೆ.