News @ your fingertips
News @ your fingertips
ಕಳೆದ ಐದು ದಿನಗಳಿಂದ ಕುಸಿತ ಕಂಡಿದ ಷೇರು ಮಾರುಕಟ್ಟೆಗೆ ಇಂದು ಶುಭ ಶುಕ್ರವಾರ.
ಪಾಸಿಟಿವ್ ಆಗಿ ಆರಂಭಗೊಂಡ ಮಾರುಕಟ್ಟೆಗೆ ಯಾವುದೇ ಹಂತದಲ್ಲೂ ಪ್ರತಿರೋಧ ಕಂಡು ಬರಲಿಲ್ಲ. ಎರಡನೇ ಅರ್ಧದಲ್ಲಿ ನಾಗಾಲೋಟ ಕಂಡ ಮಾರುಕಟ್ಟೆ ಕಳೆದ 5 ದಿನಗಳಲ್ಲಿ ಕಳೆದುಕೊಂಡಿದ್ದ ಅಂಕಗಳನ್ನು ಮರುಸ್ಥಾಪಿಸಿಕೊಳ್ಳುವತ್ತ ಮುನ್ನುಗ್ಗಿತು.
ನಿಫ್ಟಿ ಶೇ. 2.70ರಷ್ಟು ಏರಿಕೆಯಾಗಿ, 24861 ಅಂಕಗಳನ್ನು ತಲುಪಿತು. ಸೆಸ್ಸೆಕ್ಸ್ ಶೇ.1.62 ರಷ್ಟು ಗಳಿಕೆ ಕಂಡಿದ್ದು , 81322 ಅಂಕಕ್ಕೆ ತಲುಪಿತು.
ಅಮೆರಿಕಾದಲ್ಲಿ ಐಟಿ ವಲಯ ಎರಡನೇ ತ್ರೈಮಾಸಿಕದಲ್ಲಿ ನಿರೀಕ್ಷೆಗಿಂತ ಅಧಿಕ ಪ್ರಮಾಣದಲ್ಲಿ ಪ್ರಗತಿಯಲ್ಲಿ ಕಾಣುತ್ತಿರುವುದು ಮಾರುಕಟ್ಟೆಗೆ ಜೀವ ತುಂಬಿದಂತಾಯಿತು. ಐಟಿ ಷೇರುಗಳೇ ಶುಕ್ರವಾರದ ರ‌್ಯಾಲಿಯನ್ನು ಮುನ್ನಡೆಸಿದವು.
ಬಜೆಟ್ ಬಳಿಕ ತೀರಾ ಏರುಪೇರುಗಳಿಂದ ಕೂಡಿದ್ದ ಮಾರುಕಟ್ಟೆ , ಜಾಗತಿಕವಾಗಿ ಅಷ್ಟೇನು ಅನುಕೂಲಕರವಾದ ವಾತಾವರಣವಿಲ್ಲದಿದ್ದರೂ ,ಶುಕ್ರವಾರವಂತೂ ಐಟಿ ವಲಯದ ಪ್ರಭಾವವೊಂದರಿಂದಲೇ ದೊಡ್ಡ ಏರಿಕೆಯನ್ನು ಕಂಡಿದೆ. ನಿಫ್ಟಿ ಐಟಿ ಶೇ.2.30ರಷ್ಟು ಏರಿಕೆ ಕಂಡಿದೆ.
ಇದರ ಜೊತೆಯಲ್ಲಿ ಆಟೋ , ಎಫ್‌ಎಂಜಿಸಿ ಕ್ಷೇತ್ರದ ಷೇರಗಳು ಕೂಡಾ ರ‌್ಯಾಲಿಗೆ ಬಲ ನೀಡಿದವು.
More Stories
ಮಿಡ್, ಸ್ಮಾಲ್ ಕ್ಯಾಪ್ ಸ್ಟಾಕ್ಗಳ ಕಥೆಯೇನು ?
ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ
ಮೋದಿ -ಟ್ರಂಪ್ ಭೇಟಿ , ಭಾರತಕ್ಕೆ ಲಾಭ