7 rupees

News @ your fingertips

ಎಂಆರ್‌ಪಿಎಲ್‌ 1137 ಕೋಟಿ ರೂ. ಲಾಭ

ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್(ಎಂಆರ್‌ಪಿಎಲ್) ಕಂಪೆನಿ ಕಳೆದ ಆರ್ಥಿಕ ವರ್ಷದ ಅಂತಿಮ ತ್ರೈಮಾಸಿಕ ಅವಧಿಯಲ್ಲಿ 1137 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಹಿಂದಿನ ಸಾಲಿನ ಇದೇ ಅವಧಿಯಲ್ಲಿ 1908 ಕೋಟಿ ರೂ .ಲಾಭ ಗಳಿಸಿತ್ತು.
ರಿೈನರಿ ಕಾರ್ಯಾಚರಣೆಯಲ್ಲಿ ಆದಾಯ ಹಿಂದಿನ 29401 ಕೋಟಿ ರೂ. ನಿಂದ 29190 ಕೋಟಿ ರೂ.ಗೆ ಇಳಿಕೆಯಾಗಿದೆ. ತೆರಿಗೆ ಪೂರ್ವ ಲಾಭವು 2950 ಕೋಟಿ ರೂ.ನಿಂದ 1766 ಕೋಟಿ ರೂ.ಗೆ ಇಳಿಕೆ ಕಂಡಿದೆ. ಈ ತ್ರೈಮಾಸಿಕದಲ್ಲಿ ಕಂಪೆನಿಯ ರ್ತು 8800 ಕೋಟಿ ರೂ.ನಿಂದ 9116 ಕೋಟಿ ರೂ.ಗೆ ಏರಿಕೆಯಾಗಿದೆ.
ವಾರ್ಷಿಕವಾಗಿ 2023-24ನೇ ಸಾಲಿನ ಲಾಭವು ಹಿಂದಿನ 2022-23ನೇ ಸಾಲಿನ ಲಾಭ 2638 ಕೋಟಿ ರೂ.ನಿಂದ 3596 ಕೋಟಿ ರೂ.ಗೆ ಏರಿಕೆಯಾಗಿದೆ. ಕಾರ್ಯನಿರ್ವಹಣಾ ಆದಾಯವು 1,24,736 ಕೋಟಿ ರೂ.ನಿಂದ 1,05,223 ಕೋಟಿ ರೂ.ಗೆ ಇಳಿಕೆಯಾಗಿದೆ.
ಕಂಪೆನಿಯೂ ಕಳೆದ ಜನವರಿಯಲ್ಲಿ ಪ್ರತಿ ಷೇರಿಗೆ 1 ರೂ. ಮಧ್ಯಂತರ ಡಿವಿಡೆಂಡ್ ಪ್ರಕಟಿಸಿತ್ತು. ಈಗ ಮತ್ತೆ ಪ್ರತಿ ಷೇರಿಗೆ 2 ರೂ. ಡಿವಿಡೆಂಡ್ ನೀಡಲು ಉದ್ದೇಶಿಸಿದೆ.

× Subscribe us