7 rupees

News @ your fingertips

ಇರಾನ್ ಅಧ್ಯಕ್ಷರ ಸಾವು , ತೈಲದ ಮೇಲೆ ಪ್ರಭಾವ ನಿರೀಕ್ಷೆ

ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರ ಹಠಾತ್ ಸಾವು ವಿಶ್ವದ ಕಚ್ಚಾ ತೈಲ ಮಾರುಕಟ್ಟೆ ಮೇಲೆ ಒಂದಿಷ್ಟು ಪರಿಣಾಮ ಬೀರುವ ಸಾಧ್ಯತೆಗಳಿವೆ.
ವಿಶ್ವದಲ್ಲಿ ಇರಾನ್ ತೈಲ ಉತ್ಪಾದನೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಅಧ್ಯಕ್ಷರ ಹಠಾತ್ ಸಾವಿನಿಂದಾಗಿ ಅಲ್ಲಿನ ತೈಲ ಉತ್ಪಾದನೆ ಮೇಲೆ ಗಾಢವಾದ ಪರಿಣಾಮ ಬೀರುವ ಸಾಧ್ಯತೆಗಳಿವೆ. ಹಾಗಾಗಿ ತೈಲ ಉತ್ಪಾದನೆ ಕುಂಠಿತವಾದರೆ, ಬೆಲೆ ಮೇಲೂ ಗಂಭೀರ ಪ್ರಭಾವ ಬೀರುವ ಸಾಧ್ಯತೆಗಳಿವೆ ಎಂದು ನಿರೀಕ್ಷಿಸಲಾಗಿದೆ.
ಅದರೆ ತಜ್ಞರು ಹೇಳುವ ಪ್ರಕಾರ , ಮಾರುಕಟ್ಟೆಯಲ್ಲಿ ಸದ್ಯ ತೈಲದ ಪೊರೈಕೆ ಸಾಕಷ್ಟು ಇರುವ ಕಾರಣ , ಸದ್ಯದ ಪರಿಸ್ಥಿತಿ ಇದೇ ರೀತಿಯಲ್ಲಿ ಮುಂದುವರಿಯಬಹುದು.
ಈ ನಡುವೆ ತೈಲ ರಫ್ತು ದೇಶಗಳ ಸಂಸ್ಥೆ ( ಒಪೆಕ್ ) ಸದ್ಯದ ಪರಿಸ್ಥಿತಿಯ ಚರ್ಚೆ ಜೂನ್.1ರಂದು ಸಭೆ ಸೇರಲಿದೆ. ಇತ್ತೀಚಿನ ದಿನಗಳಲ್ಲಿ ಚಿನ್ನ ಹೂಡಿಕೆ ಸುರಕ್ಷಿತ ಎನ್ನುವ ಕಾರಣಕ್ಕೆ ಹೂಡಿಕೆದಾರರು , ಅತ್ತ ಹೆಚ್ಚಿನ ಆಸಕ್ತಿ ತಳೆದಿದ್ದಾರೆ. ಇದೇ ಕಾರಣದಿಂದ ಚಿನ್ನದ ಬೆಲೆ ನಿರಂತರವಾಗಿ ಏರಿಕೆ ಕಾಣುತ್ತಿದೆ. ಇದು ತೈಲ ಮಾರುಕಟ್ಟೆಯ ಮೇಲೂ ಒಂದಿಟ್ಟು ಪರಿಣಾಮ ಬೀರುತ್ತಿದೆ.