7 rupees

News @ your fingertips

ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ

ಹಕ್ಕಿ ಹೊಡೆದ ಪರಿಣಾಮ ಪಟ್ನಾದಿಂದ ರಾಂಚಿಗೆ ಪ್ರಯಾಣಿಸುತ್ತಿದ್ದ ಇಂಡಿಗೋ ಏರ್‌ಲೈನ್ಸ್ ತುರ್ತು ಭೂಸ್ಪರ್ಶ ನಡೆಸಿದ ಘಟನೆ ರಾಂಚಿಯಲ್ಲಿ ನಡೆದಿದೆ.
ವಿಮಾನದ ಮುಂಭಾಗಕ್ಕೆ ಹಕ್ಕಿ ಹೊಡೆದ ಪರಿಣಾಮ ಮುಂಭಾಗದಲ್ಲಿ ಹಾನಿಯಾಗಿದ್ದು , 175 ಪಯಾಣಿಕರಿದ್ದ ವಿಮಾನವನ್ನು ತುರ್ತಾಗಿ ರಾಂಚಿ ವಿಮಾನದಲ್ಲಿ ಇಳಿಸಲಾಯಿತು.
ವಿಮಾನ ಸಿಬಂದಿ ಹಾಗೂ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ. ವಿಮಾನ ರಾಂಚಿಯಿಂದ ಮುಂದೆ ಕೊಲಕ್ಕತ್ತಕ್ಕೆ ಪ್ರಯಾಣಿಸಬೇಕಿತ್ತು.
ಸುಮಾರು 4ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಹಕ್ಕಿಯೊಂದು ವಿಮಾನಕ್ಕೆ ಹೊಡೆದಿದೆ. ಮುಂಭಾಗದಲ್ಲಿ ಹಾನಿಯಾಗಿರುವಾಗ ಕಾರಣಕ್ಕೆ ತುರ್ತಾಗಿ ಭೂಸ್ಪರ್ಶ ಮಾಡಬೇಕಾಗಿ ಬಂತು ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ.