7 rupees

News @ your fingertips

ಅಮೆರಿಕಾ ವೀಸಾ – ಡ್ರಾಪ್ ಬಾಕ್ಸ್ ಇಲ್ಲ

ಉದ್ಯೋಗಾರ್ಥಿ ಮತ್ತು ವಿದ್ಯಾರ್ಥಿ ವರ್ಗಗಳನ್ನು ಒಳಗೊಂಡಂತೆ ಹೆಚ್ಚಿನ ವಲಸೆರಹಿತ ವೀಸಾಗಳಿಗೆ ರೂಪಿಸಲಾಗಿದ್ದ ಸಂದರ್ಶನ ಮನ್ನಾ ’ಡ್ರಾಪ್‌ಬಾಕ್ಸ್ ’ ಸೌಲಭ್ಯ ವನ್ನು ಅಮೆರಿಕಾ ರದ್ದುಗೊಳಿಸಲು ನಿರ್ಧರಿಸಿದೆ.
ಈ ಬದಲಾವಣೆಯು ಬರುವ ಸೆಪ್ಟೆಂಬರ್ 2ರಿಂದ ಅನ್ವಯವಾಗಲಿದೆ. ಅರ್ಜಿದಾರರು ಸ್ಪಷ್ಟ ವೀಸಾ ಇತಿಹಾಸವನ್ನು ಹೊಂದಿದ್ದರೂ ಸಹ, ಇನ್ನೂ ಮುಂದೆ ವೈಯಕ್ತಿಕ ಸಂದರ್ಶನಗಳಿಗೆ ಹಾಜರಾಗಿ ವೀಸಾ ಪ್ರಕ್ರಿಯೆ ಮುಗಿಸುವ ಅಗತ್ಯತೆಯನ್ನು ಹೊಸ ಕಾನೂನು ಸೂಚಿಸಿದೆ.
ಹಲವು ವರ್ಷಗಳಿಂದ , ಡ್ರಾಪ್‌ಬಾಕ್ಸ್ ಅರ್ಹ ಪ್ರಯಾಣಿಕರಿಗೆ ಮುಖಾಮುಖಿ ಸಂದರ್ಶನವನ್ನು ಕೈ ಬಿಟ್ಟು ನಿಗದಿಪಡಿಸಿದ ಸ್ಥಳದಲ್ಲಿ ದಾಖಲೆಗಳನ್ನು ಸಲ್ಲಿಸಲು ಅವಕಾಶ ಮಾಡಿಕೊಟ್ಟಿತು. ಇದು ಮುಖ್ಯವಾಗಿ ಭಾರತೀಯ ವೃತ್ತಿಪರರು ಮತ್ತು ವಿದ್ಯಾರ್ಥಿಗಳಿಗೆ ತ್ವರಿತವಾಗಿ ವೀಸಾ ಗಳಿಸಲು ಅನುಕೂಲವಾಗುತ್ತಿದ್ದು , ಒತ್ತಡವನ್ನು ಕಡಿಮೆಗೊಳಿಸಿತ್ತು.
ಕಳೆದ ಜುಲೈ 4 ರಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಮಾಡಿದ ‘ವನ್ ಬಿಗ್ ಬ್ಯೂಟಿಫುಲ್ ಬಿಲ್’ನ ಭಾಗವಾಗಿ, ಭದ್ರತೆಯನ್ನು ಹೆಚ್ಚಿಸುವುದು ಮತ್ತು ಸ್ಕ್ರೀನಿಂಗ್ ಬಿಗಿಗೊಳಿಸುವ ನಿಟ್ಟಿನಲ್ಲಿ ಹಳೆಯ ನೀತಿಯನ್ನು ಹಿಂಪಡೆಯಲಾಗಿದೆ.
ಹಾಗಾಗಿ ನೀವು ಸದ್ಯದಲ್ಲೇ ಅಂತರರಾಷ್ಟ್ರೀಯ ಪ್ರಯಾಣ ಅಥವಾ ವೀಸಾ ನವೀಕರಣವನ್ನು ಯೋಜಿಸುತ್ತಿದ್ದರೆ, ಇನ್ನು ಮುಂದೆ ಸಂದರ್ಶನ ಮನ್ನಾ (ಡ್ರಾಪ್‌ಬಾಕ್ಸ್) ಸೌಲಭ್ಯ ನಿಮಗೆ ಲಭ್ಯವಾಗದು.
ಎಚ್-1ಬಿ , ಎಲ್-1, ಎಫ್-1, ಮತ್ತು ಜೆ -1 ಸೇರಿದಂತೆ ಹೆಚ್ಚಿನ ವೀಸಾ ವರ್ಗಗಳಿಗೂ ಇನ್ನೂ ಮುಂದೆ ಡ್ರಾಪ್ ಬಾಕ್ಸ್ ಲಭ್ಯವಾಗದು.