ಚೊಚ್ಚಲ ಮಹಿಳಾ ವಿಶ್ವ ಕಪ್ ಗೆದ್ದಿರುವ ಭಾರತೀಯ ಮಹಿಳಾ ತಂಡಕ್ಕೆ ಬಹುಮಾನಗಳ ಸುರಿಮಳೆಯಾಗುತ್ತಿದೆ.
ಭಾನುವಾರ ಮುಂಬೈಯಲ್ಲಿ ನಡೆದ ಫೈನಲ್ಸ್‌ನಲ್ಲಿ ಭಾರತ ದಕ್ಷಿಣಅಫ್ರಿಕಾ ತಂಡವನ್ನು 52 ರನ್‌ಗಳಿಂದ ಸೋಲಿಸಿ ಹೊಸ ಇತಿಹಾಸವನ್ನು ನಿರ್ಮಿಸಿತು.
ಗೆದ್ದ ಭಾರತ ತಂಡ 39.77 ಕೋ.ರೂ.ಗಳ ಬಹುಮಾನ ಪಡೆಯಿತು.
ಆಸ್ಟ್ರೇಲಿಯಾದ ವಿರುದ್ದ ಅದ್ಭುತ ಆಟವಾಡಿ ಫೈನಲ್‌ಗೆ ತಲುಪಿದ್ದ ಭಾರತ ತಂಡ ಭಾನುವಾರ ಕೂಡಾ ತನ್ನ ಲಯವನ್ನು ಮುಂದುವರಿಸಿತು. ಅರಂಭಿಕ 10 ಓವರ್‌ಗಳಲ್ಲಿ 65 ರನ್‌ಗಳಿದ್ದ ಭಾರತ ತಂಡ 50 ಓವರ್‌ಗಳಲ್ಲಿ ಮತ್ತೆ 300 ಗಡಿ ದಾಟುವ ಎಲ್ಲಾ ಲಕ್ಷಣವನ್ನು ತೋರಿತ್ತು. ಆದರೆ ನಂತರ ಕೆಲವು ಓವರ್‌ಗಳಲ್ಲಿ ನಿಧಾನಗತಿಯ ರನ್ ಭಾರತವನ್ನು 298 ರನ್‌ಗಳಿಗೆ ಸೀಮಿತಗೊಳಿಸಿತು. ಈ ಬೃಹತ್ ಮೊತ್ತವನ್ನು ಎರಡನೇ ಪಾಳಿಯಲ್ಲಿ ಚೇಸ್ ಮಾಡುವುದು ಕಷ್ಟಕರವೇ. ಆದರೆ ಅತ್ಯುತ್ತಮವಾಗಿ ಆಟ ಆರಂಭಿಸಿದ ದಕ್ಷಿಣಆಫ್ರಿಕಾ ನಿಗದಿತ ಗುರಿಯನ್ನು ತಲುಪಲು ಎಲ್ಲ ಪ್ರಯತ್ನವನ್ನು ನಡೆಸಿತ್ತು. ಭಾರತದ ಬಿಗು ಬೌಲಿಂಗ್ ಹಾಗೂ ಫೀಲ್ಡಿಂಗ್ ಎದುರಾಳಿ ತಂಡವನ್ನು ಕಟ್ಟಿ ಹಾಕುವಲ್ಲಿ ಯಶಸ್ಸು ಕಂಡಿತು.
ಈ ಐತಿಹಾಸಿಕ ಗೆಲವಿಗೆ ಕಾರಣರಾದ ಎಲ್ಲ ಅಟಗಾರರನ್ನು ಆಭಿನಂದಿಸಿರುವ ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ ) ಕಾರ್ಯದರ್ಶಿ ದೇವಜಿತ್ ಸೈಕಿಯಾ ತಂಡಕ್ಕೆ 51 ಕೋಟಿ ನಗದು ಬಹುಮಾನವನ್ನು ಘೋಷಿಸಿದ್ದಾರೆ.
1983 ರಲ್ಲಿ ಕಪಿಲ್ ದೇವ್ ಭಾರತವನ್ನು ವಿಶ್ವಕಪ್ ಗೆಲ್ಲಿಸುವ ಮೂಲಕ ಭಾರತದ ಕ್ರಿಕೆಟ್‌ನಲ್ಲಿ ಹೊಸ ಯುಗಕ್ಕೆ ಕಾರಣರಾದರು.ಅದೇ ಉತ್ಸಾಹವನ್ನು ಈಗ ಮಹಿಳೆ ತಂಡ ತೋರಿದೆ. ಹರ್ಮನ್‌ಪ್ರೀತ್ ಕೌರ್ ಮತ್ತು ಅವರ ತಂಡ ಇಂದು ಟ್ರೋಫಿಯನ್ನು ಗೆದ್ದಿಲ್ಲ, ಅವರು ಎಲ್ಲಾ ಭಾರತೀಯರ ಹೃದಯಗಳನ್ನು ಗೆದ್ದಿದ್ದಾರೆ. ಅವರು ಮುಂದಿನ ಪೀಳಿಗೆಯ ಮಹಿಳಾ ಕ್ರಿಕೆಟಿಗರಿಗೆ ದಾರಿ ಮಾಡಿಕೊಟ್ಟಿದ್ದಾರೆ. ನಮ್ಮ ತಂಡವು ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿದಾಗ ಮಹಿಳಾ ಕ್ರಿಕೆಟ್ಹೊಸ ಯುಗಕ್ಕೊಂದು ಮುನ್ನಡಿ ಬರೆದಿತ್ತು ಎಂದು ಅವರು ಶ್ಲಾಘಿಸಿದ್ದಾರೆ.
ಈ ನಡುವೆ ತಂಡದ ಆಟಗಾರರಿಗೆ ಅವರ ತವರು ರಾಜ್ಯ ಸರಕಾರಗಳು ಕೂಡಾ ಬಹುಮಾನಗಳನ್ನು ಘೋಷಿಸಲು ಆರಂಭಿಸಿವೆ.
ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖವೀರ್‌ನಿಂಗ್ ಸಾಹು ತಂಡದ ಆಟಗಾರ್ತಿ ರೇಣುಕಾ ಸಿಂಗ್ ಠಾಕೂರ್ ಅವರಿಗೆ 1 ಕೋ.ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಜೊತೆಯಲ್ಲಿ ಸರಕಾರಿ ಉದ್ಯೋಗವನ್ನು ನೀಡುವುದಾಗಿ ಪ್ರಕಟಿಸಿದ್ದಾರೆ.
ಇತರ ರಾಜ್ಯಗಳಿಂದಲೂ ಇಂತಹ ಬಹುಮಾನ ಹಾಗೂ ಕೊಡುಗೆಗಳ ಮಹಾಪೂರಗಳಾಗುವ ಸಾಧ್ಯತೆಗಳಿವೆ.
More Stories
ಫೆ.1 ಬಜೆಟ್ , ಷೇರು ಮಾರುಕಟ್ಟೆ ಕೂಡಾ ಓಪನ್
ಜಿಗಿತ ಕಂಡ ಎಂಆರ್ಪಿಎಲ್ ಲಾಭ, ಷೇರು ಬೆಲೆ ಕೂಡಾ ಜಂಪ್
ಮಾದರಿಯಾದ ಬಾಸ್ ಏನು ಅನ್ನುತ್ತಿರಾ ?