News @ your fingertips
News @ your fingertips
ಜಪಾನ್ನ ಸುಮಿಟೊಮೊ ಮಿಟ್ಸುಯಿ ಬ್ಯಾಂಕಿಂಗ್ ಕಾರ್ಪೊರೇಷನ್ (ಎಸ್ಎಂಬಿಸಿ ) ಬುಧವಾರ ದಿ ಕಾರ್ಲೈಲ್ ಗ್ರೂಪ್ನ ಅಂಗಸಂಸ್ಥೆ ಸಿಎ ಬಾಸ್ಕ್ ಇನ್ವೆಸ್ಟ್ಮೆಂಟ್ಸ್ನಿಂದ ಯೆಸ್ ಬ್ಯಾಂಕಿನಲ್ಲಿ ಹೆಚ್ಚುವರಿ ಶೇ.4.2 ಪಾಲನ್ನು ಹಿಂದಿನ ಒಪ್ಪಂದದಂತೆೆ ಖರೀದಿಸಲು ಮುಂದಾಗಿದೆ.
ಯೆಸ್ ಬ್ಯಾಂಕಿನಲ್ಲಿ ಶೇ.20 ಈಕ್ವಿಟಿ ಪಾಲನ್ನು ಎಸ್ಎಂಬಿಸಿ ಸಂಸ್ಥೆ ಎಸ್ಬಿಐ ಸೇರಿದಂತೆ ಏಳು ಖಾಸಗಿ ವಿತ್ತೀಯ ಸಂಸ್ಥೆಗಳಿಂದ 13,483 ಕೋಟಿ ರೂ.ಗಳಿಗೆ ಪಡೆದುಕೊಂಡ ಬಳಿಕ ಈ ವ್ಯವಹಾರಕ್ಕೆ ಚಾಲನೆ ದೊರೆತಿದೆ. ಭಾರತದ ಬ್ಯಾಂಕಿನಲ್ಲಿ ಶೇ. 24.99ವರೆಗೆ ಪಾಲನ್ನು ಖರೀದಿಸಲು ಆರ್ಬಿಐ ಅನುಮೋದನೆ ನೀಡಿದ ಬಳಿಕ ಯೆಸ್ ಬ್ಯಾಂಕ್ನಲ್ಲಿ ಜಪಾನ್ನ ಅತಿದೊಡ್ಡ ವಿತ್ತೀಯ ಸಂಸ್ಥೆಯಾದ ಎಸ್ಎಂಬಿಸಿ ಯೆಸ್ ಬ್ಯಾಂಕ್ನಲ್ಲಿ ಹೂಡಿಕೆಗೆ ಮುಂದಾಗಿತ್ತು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ ) ಯೆಸ್ ಬ್ಯಾಂಕಿನಲ್ಲಿ ತನ್ನ ಶೇ.13.18 ಪಾಲನ್ನು ಮಾರಾಟ ಮಾಡಿದೆ. ಎಸ್ಬಿಐ ತಲಾ 21.50 ರೂ. ಬೆಲೆಯಲ್ಲಿ 413.44 ಕೋಟಿ ಷೇರುಗಳನ್ನು ಎಸ್ಎಂಬಿಸಿ ಗೆ ಸುಮಾರು 8,889 ಕೋಟಿ ರೂ.ಗಳಿಗೆ ಮಾರಾಟ ಮಾಡಿದೆ.
ಈ ವರ್ಷದ ಆರಂಭದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಅನುಮೋದನ ನಂತರ ಈ ವರ್ಗಾವಣೆ ನಡೆದಿದೆ. 2020 ರಲ್ಲಿ ಯೆಸ್ ಬ್ಯಾಂಕಿನ ಪುನರ್ರಚನೆಯಲ್ಲಿ ಎಸ್ಬಿಐ ಪ್ರಮುಖ ಹೂಡಿಕೆದಾರ ಪಾತ್ರ ವಹಿಸಿದ್ದು , ಕ್ರಮೇಣ ತನ್ನ ಹೂಡಿಕೆಯನ್ನು ಹಿಂಪಡೆಯುತ್ತಾ ಬಂದಿತ್ತು.
ಇತ್ತೀಚಿನ ಒಪ್ಪಂದದ ಪ್ರಕಾರ ಎಸ್ಎಂಬಿಸಿ ಸಂಸ್ಥೆ ಯೆಸ್ ಬ್ಯಾಂಕಿನ ಮಂಡಳಿಯಲ್ಲಿ ಇಬ್ಬರು ಕಾರ್ಯನಿರ್ವಾಹಕೇತರ ನಿರ್ದೇಶಕರನ್ನು ಹೊಂದಲಿದೆ.
ಯೆಸ್ ಬ್ಯಾಂಕ್ನ ದೊಡ್ಡ ಹೂಡಿಕೆ ಕಾರಣಕ್ಕಾಗಿಎಸ್ಎಂಬಿಸಿ ಭಾರತದಲ್ಲಿ ತನ್ನ ಪೋರ್ಟ್ಫೋಲಿಯೊ ಮರುಹಂಚಿಕೆಗೆ ಒಳಪಡಿಸಿದೆ. ಇದರ ಭಾಗವಾಗಿ ಕೋಟಕ್ ಮಹೀಂದ್ರಾ ಬ್ಯಾಂಕಿನಲ್ಲಿ ಹೊಂದಿದ್ದ ತನ್ನ ಶೇ.1.65 ಹೂಡಿಕೆಯನ್ನು 106 ಶತಕೋಟಿ ರೂ.ಗಳಿಗೆ ಮಾರಾಟ ಮಾಡಿದೆ.
More Stories
ಫೆ.1 ಬಜೆಟ್ , ಷೇರು ಮಾರುಕಟ್ಟೆ ಕೂಡಾ ಓಪನ್
ಜಿಗಿತ ಕಂಡ ಎಂಆರ್ಪಿಎಲ್ ಲಾಭ, ಷೇರು ಬೆಲೆ ಕೂಡಾ ಜಂಪ್
ಮಾದರಿಯಾದ ಬಾಸ್ ಏನು ಅನ್ನುತ್ತಿರಾ ?