7 rupees

News @ your fingertips

ಬೈಜು ದಿವಾಳಿತನ ಪರಿಹಾರ ಪ್ರಕ್ರಿಯೆ

ಮಣಿಪಾಲ ಗ್ರೂಪ್ ಆಸಕ್ತಿ

ಡಾ ರಂಜನ್ ಪೈ ನೇತೃತ್ವದ ಮಣಿಪಾಲ್ ಎಜುಕೇಶನ್ ಅಂಡ್ ಮೆಡಿಕಲ್ ಗ್ರೂಪ್ ಸಂಕಷ್ಟದಲ್ಲಿರುವ ಎಜ್ಯುಟೆಕ್ ಕಂಪೆನಿ ಬೈಜುವಿನ ಪೋಷಕ ಕಂಪನಿಯಾದ ಥಿಂಕ್ ಲರ್ನ್‌ನ ಕಾರ್ಪೊರೇಟ್ ದಿವಾಳಿತನ ಪರಿಹಾರ ಪ್ರಕ್ರಿಯೆಯಲ್ಲಿ ಭಾಗವಹಿಸಲು ಆಸಕ್ತ ತೋರಿದೆ.
ಈ ಕುರಿತಂತೆ ತನ್ನ ಆಪೇಕ್ಷಾ ಪತ್ರವನ್ನು ಸಲ್ಲಿಸಲಾಗಿದೆ ಎಂದು ಕಂಪನಿಯು ಷೇರು ಮಾರುಕಟ್ಟೆ ವಿನಿಮಯ ಕೇಂದ್ರಗಳಿಗೆ ತಿಳಿಸಿದೆ.
ವಿನಿಮಯ ಕೇಂದ್ರಗಳಿಗೆ ಮಣಿಪಾಲ ಸಮೂಹ ಸಂಸ್ಥೆ ಸಲ್ಲಿಸಿದ ದಾಖಲೆಗಳ ಪ್ರಕಾರ, ಎಜ್ಯುಟೆಕ್ ಕಂಪೆನಿಯ ಹಣಕಾಸು ಮತ್ತು ಕಾರ್ಯಾಚರಣೆಯ ವಿವರಗಳನ್ನು ಪರೀಕ್ಷಿಸಲು ಹಾಗೂ ಥಿಂಕ್ ಲರ್ನ್‌ನ ದಿವಾಳಿತನ ಪರಿಹಾರ ಪ್ರಕ್ರಿಯೆಯಲ್ಲಿ ತಾನು ಪಾಲ್ಗೊಳ್ಳಲು ಬಯಸುವುದಾಗಿ ಹೇಳಿ ಕೊಂಡಿದೆ.
ದಿವಾಳಿ ತನ ಪರಿಹಾರ ಪ್ರಕ್ರಿಯೆಯ ಗಡುವನ್ನು ನವೆಂಬರ್ 13ಕ್ಕೆ ವಿಸ್ತರಿಸಿದ ನಂತರ ಮಣಿಪಾಲ ಗ್ರೂಪ್ ತನ್ನ ಆಸಕ್ತಿ ಸಲ್ಲಿಸುತ್ತಿರುವುದು ಇದು ಎರಡನೇ ಬಾರಿಯಾಗಿದೆ.