News @ your fingertips
News @ your fingertips
ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ನ.14 ( ಶುಕ್ರವಾರ )ಪ್ರಕಟವಾಗಲಿದೆ.
ಬಿಹಾರ ವಿಧಾನ ಸಭೆಗೆ ಶಾಸಕರ ಆಯ್ಕೆಗೆ 2 ಹಂತದಲ್ಲಿ ಮತದಾನ ನಡೆದಿತ್ತು. ಯಾವುದೇ ಗೊಂದಲ , ಅಹಿತಕರ ಘಟನಗಳಿಲ್ಲದೆ , ಯಶಸ್ವಿಯಾಗಿ ಚುನಾವಣೆಗಳನ್ನು ನಿರ್ವಹಿಸಲಾಗಿದೆ ಎಂದು ಚುನಾವಣಾ ಆಯೋಗವು ಹೇಳಿದೆ. ರಾಜ್ಯದಲ್ಲಿ ಒಟ್ಟು ಶೇ. 67.13 ಮತದಾನ ದಾಖಲಾಗಿದೆ. 1951 ರ ನಂತರದ ಇದು ನಡೆದಿರುವ ಅತ್ಯಧಿಕ ಮತದಾನವಾಗಿದೆ.
ನ 14 ರಂದು ( ಶುಕ್ರವಾರ ) ರಾಜ್ಯದ ಎಲ್ಲ ಕಡೆಗಳಲ್ಲಿ ಸುಗಮ ಮತ ಎಣಿಕೆ ಪ್ರಕ್ರಿಯೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಆಯೋಗ ಹೇಳಿದೆ.
ಬೆಳಿಗ್ಗೆ 8:00 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭಗೊಳ್ಳಲಿದೆ. ಅಂಚೆ ಮತಗಳ ಎಣಿಕೆ ಬಳಿಕ ಎಲೆಕ್ಟ್ರಾನಿಕ್ ಮತಗಳ ಎಣಿಕೆ ನಡೆಯಲಿದೆ. ಮಧ್ಯಾಹ್ನ ಹೊತ್ತಿಗೆ ಎಲ್ಲಾ 243 ಸ್ಥಾನಗಳ ಫಲಿತಾಂಶ ಪ್ರಕಟವಾಗುವ ನಿರೀಕ್ಷೆ ಇದೆ.
ಈಗಾಗಲೇ ಹಲವಾರು ಏಜೆನ್ಸಿಗಳ ಮತದಾನೋತ್ತರ ಸಮೀಕ್ಷೆಗಳು ಫ್ರಕಟವಾಗಿದ್ದು ,ಬಿಜೆಪಿ ನೇತೃತ್ವದ ಎನ್ಡಿಎ ಕೂಟ ನಿಚ್ಚಳ ಬಹುಮತ ಪಡೆಯುವುದಾಗಿ ಅವು ಹೇಳಿವೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ನಿರೀಕ್ಷೆಗಳಿವೆ.
ಎನ್ಡಿಎ ಮೈತ್ರಿ ಕೂಟ ಸುಮಾರು 135- 147 ಸ್ಥಾನಗಳನ್ನು ಪಡೆಯುವ ಸಾಧ್ಯಗಳಿವೆ ಎಂದು ಸಮೀಕ್ಷೆಗಳು ತಿಳಿಸಿವೆ.
ಶುಕ್ರವಾರ ಷೇರು ಮಾರುಕಟ್ಟೆಯೂ ಕೂಡಾ ಇದಕ್ಕೆ ಪೂರಕವಾಗಿ ಸ್ಪಂದಿಸುವ ನಿರೀಕ್ಷೆ ಇದೆ. ಮಾರುಕಟ್ಟೆಯಲ್ಲಿ ಅಲ್ಪ ಪ್ರಮಾಣದ ಏರಿಕೆಯನ್ನು ಕಾಣಬಹುದಾಗಿದೆ.
More Stories
ಫೆ.1 ಬಜೆಟ್ , ಷೇರು ಮಾರುಕಟ್ಟೆ ಕೂಡಾ ಓಪನ್
ಜಿಗಿತ ಕಂಡ ಎಂಆರ್ಪಿಎಲ್ ಲಾಭ, ಷೇರು ಬೆಲೆ ಕೂಡಾ ಜಂಪ್
ಮಾದರಿಯಾದ ಬಾಸ್ ಏನು ಅನ್ನುತ್ತಿರಾ ?