7 rupees

News @ your fingertips

ಫೆ.1 ಬಜೆಟ್ , ಷೇರು ಮಾರುಕಟ್ಟೆ ಕೂಡಾ ಓಪನ್

ಫೆ.1ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲ ಸೀತಾರಾಮ್ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಅಂದು ಷೇರು ಮಾರುಕಟ್ಟೆ ಕೂಡಾ ಎಂದಿನಂತೆ ಕಾರ್ಯ ನಿರ್ವಹಿಸಲಿದೆ ಎಂದು ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ ಪ್ರಕಟನೆ ತಿಳಿಸಿದೆ.
ಪ್ರತಿ ವರ್ಷವೂ ಫೆ.1ರಂದು ಕೇಂದ್ರ ಬಜೆಟ್ ಮಂಡನೆಯಾಗುತ್ತದೆ. ಈ ಬಾರಿ ಫೆ.1 ಭಾನುವಾರ ಬರುವ ಕಾರಣ , ಕೇಂದ್ರ ಬಜೆಟ್ ಅಂದು ಮಂಡನೆಯಾಗುವ ಬಗ್ಗೆ ಊಹಾಪೋಹಗಳಿದ್ದವು. ಅದರೆ ಕೇಂದ್ರ ಸರಕಾರ ಫೆ.1ರಂದೇ ಬಜೆಟ್ ಮಂಡಿಸಿ ಸಂಪ್ರದಾಯವನ್ನು ಮುಂದವರಿಸಲು ನಿರ್ಧರಿಸಿದ ಕಾರಣ ರಜಾದಿನವಾದರೂ ಅಂದು ಪಾರ್ಲಿಮೆಂಟ್ ಕಲಾಪಗಳು ನಡೆಯಲಿವೆ.
ಕೇಂದ್ರ ಬಜೆಟ್ ಮಂಡನೆಯಾಗುತ್ತಿರುವ ಕಾರಣ ಫೆ.1ರಂದು ಷೇರು ಮಾರುಕಟ್ಟೆ ವಹಿವಾಟು ನಡೆಸಲು ಷೇರು ವಿನಿಮಯ ಕೇಂದ್ರಗಳು ನಿರ್ಧರಿಸಿವೆ.
ಕೇಂದ್ರ ಬಜೆಟ್ ಮಂಡನೆ ದಿನ ಸಾಮಾನ್ಯವಾಗಿ ಷೇರು ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ವಹಿವಾಟುಗಳು ನಡೆಯುತ್ತವೆ. ಬಜೆಟ್ ಅಭಿವೃದ್ಧಿ ಪರವಾಗಿದ್ದರೆ , ಷೇರು ಮಾರುಕಟ್ಟೆ ದೊಡ್ಡ ಮಟ್ಟದ ಏರಿಕೆಯನ್ನು ಕಂಡರೆ , ನಕಾರಾತ್ಮಕ ಅಂಶಗಳಿದ್ದರೆ ಭಾರಿ ಇಳಿಕೆಗೂ ಕಾರಣವಾಗುತ್ತದೆ. ಒಟ್ಟಾರೆ ಅಂದು ವಹಿವಾಟಿನಲ್ಲಿ ಭಾರೀ ಏರಿಳಿಕೆ ಸಾಮಾನ್ಯವಾಗಿರುತ್ತದೆ.