News @ your fingertips
News @ your fingertips
ಪಂಜಾಬ್ ರಾಜ್ಯದಲ್ಲಿ ಸುರಿಯುತ್ತಿರುವ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿದ್ದು . ಜನರ ರಕ್ಷಣೆಯೇ ದೊಡ್ಡ ಸವಾಲಾಗಿದೆ.
ಬುಧವಾರ ಭಾರತೀಯ ಸೇನೆಯು ಸಾಹಸಮಯ ರಕ್ಷಣಾ ಕಾರ್ಯಾಚರಣೆ ನಡೆಸಿ, ಪಂಜಾಬ್ನ ಗುರುದಾಸ್ಪುರ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಿಲುಕಿಕೊಂಡಿದ್ದ ನೂರಾರು ಜನರನ್ನು ರಕ್ಷಿಸಿ, ಸ್ಥಳಾಂತರಿಸಿದೆ.
ಪ್ರವಾಹ ನೀರಿನಿಂದ ಸಂಪೂರ್ಣವಾಗಿ ಸಂಪರ್ಕ ಕಡಿತಗೊಂಡ ಹಳ್ಳಿ ಪ್ರದೇಶಗಳಲ್ಲಿ ಸೇನಾ ಹೆಲಿಕಾಪ್ಟರ್ಗಳು ಕಾರ್ಯಚರಣೆ ನಡೆಸುತ್ತಿರುವುದು ಸಿನಿಮೀಯ ದೃಶ್ಯಗಳಂತೆ ಭಾಸವಾಗುತ್ತಿದ್ದವು. ಅತ್ಯಂತ ಕಠಿಣ ಪರಿಸ್ಥಿತಿಯಲ್ಲೂ ಜನರನ್ನು ವಿಮಾನದ ಮೂಲಕ ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗುತ್ತಿದೆ. ಜನರ ಗುಂಪಿನ ಸುತ್ತಲಿನ ಪ್ರದೇಶಗಳು ಸಂಪೂರ್ಣ ಜಲಾವೃತವಾಗಿದ್ದು , ಎಲ್ಲೂ ನೋಡಿದರೂ ಬರೇ ನೀರು ಕಾಣುತ್ತಿದೆ.
ಬುಧವಾರ ಗುರುದಾಸ್ಪುರದ ಲಾಸಿಯನ್ ಪ್ರದೇಶಗಳಲ್ಲಿ ಪ್ರವಾಹದ ನೀರು ವೇಗವಾಗಿ ಏರಲು ಪ್ರಾರಂಭಿಸಿದ್ದು , ಈ ಸಂದರ್ಭದಲ್ಲಿ ಜೀವ ಹಾನಿಯ ಅಪಾಯ ಕಂಡು ಬಂದಾಗ ಭಾರತೀಯ ಸೇನೆಯು ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿತು.
ಕಟ್ಟಡವೊಂದು ಕುಸಿದು ಪ್ರವಾಹದಲ್ಲಿ ಕೊಚ್ಚಿಹೋಗುವ ಕೆಲವೇ ಸಮಯದ ಮುನ್ನ ಅಲ್ಲಿ ಆಶ್ರಯ ಪಡೆದಿದ್ದ 25 ಜನರನ್ನು ಭಾರತೀಯ ಸೇನೆ ಸುರಕ್ಷಿತವಾಗಿ ಸ್ಥಳಾಂತರಿಸುವ ಮೂಲಕ ದೊಡ್ಡ ದುರಂತವೊಂದನ್ನು ತಪ್ಪಿಸಿತು.
ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಪಂಜಾಬ್ನಲ್ಲಿ ಭಾರಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಈ ಪರಿಸ್ಥಿತಿಯು 1988 ರ ಪ್ರವಾಹದಂತೆಯೇ ಇದೆ ಎನ್ನುವುದು ಸ್ಥಳೀಯರು ನೆನಪಿಸಿಕೊಳ್ಳುತ್ತಿದ್ದಾರೆ.ಉಕ್ಕಿ ಹರಿಯುವ ಸಟ್ಲೆಜ್, ಬಿಯಾಸ್ ಮತ್ತು ರಾವಿ ನದಿಗಳು ದಡದಲ್ಲಿರುವ ದೊಡ್ಡ ಕೃಷಿ ಭೂಮಿಗಳು ಮತ್ತು ಹಳ್ಳಿಗಳನ್ನು ಸಂಪೂರ್ಣ ಜಲಾವೃತಗೊಳಿಸಿವೆ.
ಪಠಾಣ್ಕೋಟ್, ಗುರುದಾಸ್ಪುರ್, ಫಜಿಲ್ಕಾ, ಕಪುರ್ತಲಾ, ತರಣ್ ತರಣ್, ಫಿರೋಜ್ಪುರ್, ಹೋಶಿಯಾರ್ಪುರ್ ಮತ್ತು ಅಮೃತಸರ ಜಿಲ್ಲೆಗಳು ಹೆಚ್ಚು ಹಾನಿಗೊಳಗಾದ ಪ್ರದೇಶಗಳಾಗಿವೆ.
.
More Stories
ಫೆ.1 ಬಜೆಟ್ , ಷೇರು ಮಾರುಕಟ್ಟೆ ಕೂಡಾ ಓಪನ್
ಜಿಗಿತ ಕಂಡ ಎಂಆರ್ಪಿಎಲ್ ಲಾಭ, ಷೇರು ಬೆಲೆ ಕೂಡಾ ಜಂಪ್
ಮಾದರಿಯಾದ ಬಾಸ್ ಏನು ಅನ್ನುತ್ತಿರಾ ?