News @ your fingertips
News @ your fingertips
ನವ ಮಂಗಳೂರು ಬಂದರು ಪ್ರಾಧಿಕಾರದ ಸುವರ್ಣ ಮಹೋತ್ಸವಕ್ಕೆ ಬುಧವಾರ ಹೊಸದಿಲ್ಲಿಯಲ್ಲಿ ಅಧಿಕೃತ ಚಾಲನೆ ನೀಡಲಾಯಿತು.
ಕೇಂದ್ರ ಬಂದರು ಹಾಗೂ ಜಲಯಾನ ಖಾತೆ ಸಚಿವ ಸರ್ಬಾನಂದ ಸೋನೋವಾಲ್ ಅವರು ಸುವರ್ಣ ಮಹೋತ್ಸವದ ಕಾರ್ಯಕ್ರಮಗಳನ್ನು ಉದ್ಘಾಟಿಸಿದರು.
ಇಲಾಖೆ ಜಂಟಿ ಕಾರ್ಯದರ್ಶಿ ಆರ್. ಲಕ್ಷ್ಮಣನ್, ಪ್ರಾಧಿಕಾರದ ಅಧ್ಯಕ್ಷ ಡಾ. ಎ. ವಿ. ರಮಣ, ಇಲಾಖೆಯ ಹೆಚ್ಚುವರಿ ನಿರ್ದೇಶಕ ರಾಜೀವ್ ಜಲೋಟಾ, ಕರ್ನಾಟಕ ಮೆರಿಟೈಮ್ ಬೋರ್ಡ್ನ ಸಿಇಒ ಎಚ್. ಸಿ. ಬಾಲಚಂದ್ರ, ಬಂದರು ಅಭಿವೃದ್ಧಿ ಸಲಹೆಗಾರ ಎಚ್. ಎನ್. ಅಶ್ವಥ್ ಮತ್ತು ಪ್ರಾಧಿಕಾರದ ಉಫಾಧ್ಯಕ್ಷೆ ಅಧ್ಯಕ್ಷೆ ಎಸ್. ಶಾಂತಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನವ ಮಂಗಳೂರು ಬಂದರಿನಲ್ಲಿ ಕ್ರೂಸ್ ಟರ್ಮಿನಲ್ಗೆ ಮೀಸಲಾದ ಗೇಟ್, ಆಧುನಿಕ ಶೇಖರಣಾ ಮೂಲಸೌಕರ್ಯ , 150 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸೇರಿದಂತೆ ಎಂಟು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಾಯಿತು. ಮೂಲಸೌಕರ್ಯ ಅಭಿವೃದ್ದಿ ಮತ್ತು ಡಿಜಿಟಲ್ ಯೋಜನೆಗಳು , ಸುವರ್ಣ ಮಹೋತ್ಸವ ಅಂಚೆ ಚೀಟಿ, ಸ್ಮರಣಾರ್ಥ ನಾಣ್ಯ ಮತ್ತು ಗೀತೆ ಬಿಡುಗಡೆ , ಪ್ರಾಧಿಕಾರದಲ್ಲಿ ಸವಲತ್ತುಗಳ ಆಧುನೀಕರಣ, ಹಸಿರು ಸಮುದ್ರ ದೃಷ್ಟಿಕೋನ ಮತ್ತು ಸಮುದಾಯ ಅಭಿವೃದ್ಧಿ ಮುಂತಾದ ಹಲವು ಯೋಜನೆಗಳನ್ನು ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಹೊಂದಲಾಗಿದೆ.
.
More Stories
ಫೆ.1 ಬಜೆಟ್ , ಷೇರು ಮಾರುಕಟ್ಟೆ ಕೂಡಾ ಓಪನ್
ಜಿಗಿತ ಕಂಡ ಎಂಆರ್ಪಿಎಲ್ ಲಾಭ, ಷೇರು ಬೆಲೆ ಕೂಡಾ ಜಂಪ್
ಮಾದರಿಯಾದ ಬಾಸ್ ಏನು ಅನ್ನುತ್ತಿರಾ ?