News @ your fingertips
News @ your fingertips
ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಉಡುಪಿ ಶ್ರೀ ಕೃಷ್ಣ ಮಠ ಹಾಗೂ ಗೋವಾದ ಪರ್ತಗಾಳಿ ಮಠದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.
ದೇಶದ ಪ್ರಗತಿ , ಸರ್ವಾಂಗೀಣ ಅಭಿವೃದ್ದಿ ದೃಷ್ಟಿಯಿಂದ ಭಾರತೀಯರು ‘ನವ ಭಾರತ ನವ ಸಂಕಲ್ಪ’ಗಳನ್ನು ಕೈಗೊಳ್ಳುವಂತೆ ಕರೆ ನೀಡಿದರು.
ಬೆಳಗ್ಗೆ ಉಡುಪಿಯಲ್ಲಿ ಶ್ರೀ ಪುತ್ತಿಗೆ ಮಠದ ಆಯೋಜಿಸಿದ್ದ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಧಾನಿಯವರು ಬಳಿಕ ಮಧ್ಯಾಹ್ನ ಗೋವಾದ ಪರ್ತಗಾಳಿ ಮಠದ 550 ವರ್ಷ ಸಂಭ್ರಮ ಹಾಗೂ77 ಅಡಿ ಎತ್ತರದ ಶ್ರೀ ರಾಮ ಮೂರ್ತಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ದೇಶದ ಬೆಳವಣಿಗೆಗಾಗಿ ಜನರು ಪಾಲುದಾರರಾಗಬೇಕು, ಆ ನಿಟ್ಟಿನಲ್ಲಿ ಸರಳವಾದ 9 ಸಂಕಲ್ಪಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದರು.
ನೀರಿನ ಸಂರಕ್ಷಣೆ , ಬಡ ಜನರಿಗೆ ಸಹಾಯ , ಆರೋಗ್ಯ ಸಂರಕ್ಷಣೆಗಾಗಿ ಯೋಗ ಹಾಗೂ ಕ್ರೀಡೆ , ದೇಶ ದರ್ಶನ , ಪ್ರಾಚೀನ ಹಸ್ತ ಪ್ರತಿಗಳ ಸಂರಕ್ಷಣೆ , ತಾಯಿ ಹೆಸರಿನಲ್ಲೊಂದು ಗಿಡ ನೆಡುವುದು, ಸ್ವಚ್ಚತೆ ಕಾಪಾಡುವುದು, ಸ್ವದೇಶಿ ವಸ್ತುಗಳ ಬಳಕೆ , ನೈಸರ್ಗಿಕ ಕೃಷಿ ಪ್ರೋತ್ಸಾಹ -ಈ 9 ಸಂಕಲ್ಪಗಳನ್ನು ಪ್ರತಿಯೊಬ್ಬರು ಕೈಗೊಂಡರೆ ಭಾರತ ಶರವೇಗದಲ್ಲಿ ಪ್ರಗತಿ ಹೊಂದಲು ಸಾಧ್ಯ ಎಂದು ಹೇಳಿದರು.
ಭಾರತ ಈಗ ಮೊದಲಿನ ಭಾರತವಲ್ಲ. ಈ ಹಿಂದೆ ಗಡಿಗಳಲ್ಲಿ ಏನಾದರೂ ಸಮಸ್ಯೆಗಳಾದರೆ , ಸರಕಾರದಲ್ಲಿರುವವರು ಮೌನಿಗಳಾಗಿ ಇರುತ್ತಿದ್ದರು. ಈಗ ಹಾಗಿಲ್ಲ , ನಾವು ಶಾಂತಿ ಬಯಸುವವರು. ನಮಗೆ ಶಾಂತಿಯಿಂದ ಇರಲು ಗೊತ್ತು , ಶಾಂತಿಯನ್ನು ನೆಲೆ ಮಾಡಲು ಗೊತ್ತು ಎಂದು ಅವರು ಎಚ್ಚರಿಕೆ ಮಾತುಗಳನ್ನು ಹೇಳಿದರು.
More Stories
ಫೆ.1 ಬಜೆಟ್ , ಷೇರು ಮಾರುಕಟ್ಟೆ ಕೂಡಾ ಓಪನ್
ಜಿಗಿತ ಕಂಡ ಎಂಆರ್ಪಿಎಲ್ ಲಾಭ, ಷೇರು ಬೆಲೆ ಕೂಡಾ ಜಂಪ್
ಮಾದರಿಯಾದ ಬಾಸ್ ಏನು ಅನ್ನುತ್ತಿರಾ ?