News @ your fingertips
News @ your fingertips
ಭಾರತದ ಕೈಗಾರಿಕಾ ಉತ್ಪಾದನೆಯು ಅಕ್ಟೋಬರ್ನಲ್ಲಿ ವರ್ಷದಿಂದ ವರ್ಷಕ್ಕೆ ಹೋಲಿಸಿದರೆ ಶೇ. 0.4 ರಷ್ಟು ಪ್ರಗತಿ ಕಂಡಿದೆ.ಆದರೆ ಉತ್ಪಾದನೆ, ಗಣಿಗಾರಿಕೆ ಮತ್ತು ವಿದ್ಯುತ್ ಉತ್ಪಾದನೆ ಕುಗ್ಗಿರುವುದರಿಂದ ಕಳೆದ 14 ತಿಂಗಳಲ್ಲಿಯೇ ಇಂದು ನಿಧಾನಗತಿಯ ಪ್ರವೃತ್ತಿ ಕಂಡು ಬಂದಿದೆ .
ಅಕ್ಟೋಬರ್ನಲ್ಲಿ ಕೈಗಾರಿಕಾ ಉತ್ಪಾದನೆಯು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರು ಶೇ. 3.7ಗಿಂತ ಕಡಿಮೆಯಾಗಿದೆ. ಸೆಪ್ಟೆಂಬರ್ನಲ್ಲಿ, ಕೈಗಾರಿಕಾ ಉತ್ಪಾದನೆಯು ವಾರ್ಷಿಕವಾಗಿ ಶೇ.4 ರಷ್ಟು ಬೆಳವಣಿಗೆ ಕಂಡಿದೆ ಎಂದು ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಸೋಮವಾರ ಬಿಡುಗಡೆ ಮಾಡಿದ ತಾತ್ಕಾಲಿಕ ದತ್ತಾಂಶದಲ್ಲಿ ವಿವರಿಸಲಾಗಿದೆ.
ಈ ತಿಂಗಳು ಕೊಂಚ ಪ್ರಗತಿಯನ್ನು ಕಾಣಲಾಗಿದ್ದು , ಶೇ. 3.2 ಬೆಳವಣಿಗೆ ನಿರೀಕ್ಷಿಸಲಾಗಿದೆ.
ಇತ್ತೀಚಿನ ವರದಿಗಳ ಪ್ರಕಾರ , ದೇಶೀಯ ಬೇಡಿಕೆ, ಜಾಗತಿಕ ಅನಿಶ್ಚಿತತೆ ಮತ್ತು ವಲಯ-ನಿರ್ದಿಷ್ಟ ಸವಾಲುಗಳ ನಡುವೆ ಕೈಗಾರಿಕಾ ಚಟುವಟಿಕೆಯಲ್ಲಿ ದುರ್ಬಲತೆ ಕಂಡು ಬಂದಿದೆ. ಚೇತರಿಕೆ ಪ್ರಮಾಣವೂ ಕುಗ್ಗಿದೆ.
ಈ ಹಣಕಾಸು ವರ್ಷದಲ್ಲಿ ಕೈಗಾರಿಕಾ ಕಾರ್ಯಕ್ಷಮತೆಯು ಅಸ್ಥಿರವಾಗಿದೆ. ಜುಲೈನಿಂದ ವೇಗವನ್ನು ಪಡೆಯುವ ನಿರೀಕ್ಷೆ ಇತ್ತಾದರೂ , ಅದಕ್ಕಿಂತ ಮೊದಲಿನ ತ್ರೈಮಾಸಿಕ ಏಪ್ರಿಲ್-ಜೂನ್ನಲ್ಲಿ ಚೇತರಿಕೆ ಪ್ರಮಾಣ ತೀರಾ ಕುಂಠಿತಗೊಂಡಿತ್ತು.
ಕೈಗಾರಿಕಾ ಉತ್ಪಾದನೆಯ ಐದನೇ ಎರಡರಷ್ಟು ಭಾಗವನ್ನು ಹೊಂದಿರುವ ಮೂಲಸೌಕರ್ಯ ವಲಯವು ಅಕ್ಟೋಬರ್ನಲ್ಲಿ ಶೂನ್ಯ ಬೆಳವಣಿಗೆಯನ್ನು ದಾಖಲಿಸಿರುವುದು ದೊಡ್ಡ ಹೊಡೆತವನ್ನು ನೀಡಿದೆ.
ಈ ಉತ್ಪಾದನೆಯೂ ವರ್ಷದಿಂದ ವರ್ಷಕ್ಕೆ ಹೋಲಿಸಿದರೆ ಯಾವುದೇ ಬದಲಾವಣೆಯನ್ನು ಕಂಡಿಲ್ಲ ಎಂದು ಈ ತಿಂಗಳ ಆರಂಭದಲ್ಲಿ ಬಿಡುಗಡೆಯಾದ ವಾಣಿಜ್ಯ ಸಚಿವಾಲಯದ ದತ್ತಾಂಶವು ವಿವರಿಸಿದೆ.
ಸರಣಿ ಹಬ್ಬಗಳ ಕಾರಣಕ್ಕೆ ಕೆಲಸದ ದಿನಗಳ ಸಂಖ್ಯೆ ಕಡಿಮೆಯಾಗಿರುವುದೂ ಕೂಡಾ ನಿಧಾನಗತಿಯ ಬೆಳವಣಿಗೆಗೆ ಕಾರಣವಾಗಿರಬೇಕು ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.
ಗಣಿಗಾರಿಕೆ ಉತ್ಪಾದನೆಯು ಅಕ್ಟೋಬರ್ನಲ್ಲಿ ವರ್ಷದಿಂದ ವರ್ಷಕ್ಕೆ ಶೇ.1.8 ರಷ್ಟು ಕುಗ್ಗಿದೆ. ಇಂಧನ ಉತ್ಪಾದನೆ ಅಕ್ಟೋಬರ್ನಲ್ಲಿ ಶೇ 6.9ರಷ್ಟು ಇಳಿದಿದೆ.
More Stories
ಫೆ.1 ಬಜೆಟ್ , ಷೇರು ಮಾರುಕಟ್ಟೆ ಕೂಡಾ ಓಪನ್
ಜಿಗಿತ ಕಂಡ ಎಂಆರ್ಪಿಎಲ್ ಲಾಭ, ಷೇರು ಬೆಲೆ ಕೂಡಾ ಜಂಪ್
ಮಾದರಿಯಾದ ಬಾಸ್ ಏನು ಅನ್ನುತ್ತಿರಾ ?