News @ your fingertips
News @ your fingertips
ಇತ್ತೀಚಿಗೆ ದೇಶೀಯ ಕಾರ್ಯಾಚರಣೆಗಳಲ್ಲಿ ಸಮಸ್ಯೆಗಳನ್ನು ಎದುರಿಸಿದ ಇಂಡಿಗೋ ಸಂಸ್ಥೆ ತನ್ನ ಸಾಮರ್ಥ್ಯವನ್ನು ವೃದ್ಥಿಸಲು ಉಪಕ್ರಮಗಳಿಗೆ ಮುಂದಾಗಿದೆ. ಇದರ ಪ್ರಕಾರ ಕತಾರ್ ಏರ್ವೇಸ್ ಮತ್ತು ಫ್ರೀಬರ್ಡ್ ಏರ್ಲೈನ್ಸ್ನೊಂದಿಗೆ ವೆಟ್-ಲೀಸ್ ಒಪ್ಪಂದಕ್ಕೆ ಸಹಿ ಮಾಡಿದೆ ಎಂದು ವರದಿಯಾಗಿದೆ.
ಸರಳ ಭಾಷೆಯಲ್ಲಿ ಹೇಳುವುದಾದರೆ ವೆಟ್-ಲೀಸ್ ಒಪ್ಪಂದ ಅಂದರೆ , ವಿಮಾನದ ಗುತ್ತಿಗೆ ಜೊತೆಗೆ ಕಾಕ್ಪಿಟ್ ಸಿಬ್ಬಂದಿ, ಕ್ಯಾಬಿನ್ ಸಿಬ್ಬಂದಿ, ನಿರ್ವಹಣೆ ಮತ್ತು ವಿಮೆ ಕುರಿತ ದ್ವಿಪಕ್ಷೀಯ ಒಪ್ಪಂದ ಇದಾಗಿದೆ. ಇದನ್ನು ಎಲ್ಲವನ್ನೂ ಗುತ್ತಿಗೆದಾರ ಸಂಸ್ಥೆ ಒದಗಿಸಬೇಕಾಗುತ್ತದೆ.
ಸದ್ಯದ ಮಾಹಿತಿಯಂತೆ ಇಂಡಿಗೋ ಸಂಸ್ಥೆ ಕತಾರ್ ಏರ್ವೇಸ್ನಿಂದ ಎರಡು ಮತ್ತು ಫ್ರೀಬರ್ಡ್ ಏರ್ಲೈನ್ಸ್ನಿಂದ ಐದು ವಿಮಾನಗಳನ್ನು ಗುತ್ತಿಗೆಗೆ ಪಡೆಯಲಿದೆ.
ಇಂಡಿಗೋಗೆ ಡಿಸೆಂಬರ್ 2025 ಮತ್ತು ಜನವರಿ 2026 ರಲ್ಲಿ ಎರಡು ವಿಮಾನಗಳನ್ನು ಕತಾರ್ ಏರ್ವೇಸ್ನಿಂದ ತರಲು ಸಿದ್ದತೆ ನಡೆಸಿದೆ. ಇದರ ಜೊತೆಯಲ್ಲಿ ಜನವರಿ ಆರಂಭದಲ್ಲೇ ಐದು ಏರ್ಬಸ್ ಎ320 ವಿಮಾನಗಳನ್ನು ಹೆಚ್ಚುವರಿಯಾಗಿ ಪೈಲಟ್ಗಳು ಮತ್ತು ಸಿಬ್ಬಂದಿಯೊಂದಿಗೆ ಫ್ರೀಬರ್ಡ್ ಏರ್ಲೈನ್ಸ್ನಿಂದ ಪಡೆದುಕೊಳ್ಳಲಿದೆ.
ಈ ಕ್ರಮಗಳು ಅಲ್ಪಾವಧಿಯಲ್ಲಿ ಇಂಡಿಗೋದ ದೇಶೀಯ ಸಾಮರ್ಥ್ಯವನ್ನು ಹೆಚ್ಚಿಸುವ ನಿರೀಕ್ಷೆ ಹೊಂದಲಾಗಿದೆ.
ಈ ವೆಟ್-ಲೀಸ್ ವಿಮಾನಗಳಿಗೆ ಬೆಂಗಳೂರು ಪ್ರಾಥಮಿಕ ಕಾರ್ಯಾಚರಣೆಯ ನೆಲೆಯಾಗಲಿದೆ.
ಇಂಡಿಗೋ ತನ್ನ ನೆಟ್ವರ್ಕ್ನಾದ್ಯಂತ ಫ್ರೀಬರ್ಡ್ ಏರ್ಲೈನ್ಸ್ ವಿಮಾನಗಳನ್ನು ನಿಯೋಜಿಸಲು ಯೋಜಿಸಿದೆ. ಬೆಂಗಳೂರನ್ನು ಕೋಲ್ಕತ್ತಾ, ಅಹಮದಾಬಾದ್ ಮತ್ತು ಸೂರತ್ನಂತಹ ಸ್ಥಳಗಳಿಗೆ ಸಂಪರ್ಕಿಸುವ ಪ್ರಾದೇಶಿಕ ಮಾರ್ಗಗಳ ಮೇಲೆ ಅದು ತನ್ನ ಗಮನವನ್ನು ಕೇಂದ್ರೀಕರಿಸಿದೆ ಎಂದು ಮೂಲಗಳು ತಿಳಿಸಿವೆ.
More Stories
ಫೆ.1 ಬಜೆಟ್ , ಷೇರು ಮಾರುಕಟ್ಟೆ ಕೂಡಾ ಓಪನ್
ಜಿಗಿತ ಕಂಡ ಎಂಆರ್ಪಿಎಲ್ ಲಾಭ, ಷೇರು ಬೆಲೆ ಕೂಡಾ ಜಂಪ್
ಮಾದರಿಯಾದ ಬಾಸ್ ಏನು ಅನ್ನುತ್ತಿರಾ ?