ರಾಯಲ್ ಚಾಲೆಂಜರ್ಸ್ಸ್ ಬೆಂಗಳೂರು ಶೀಘ್ರದಲ್ಲೇ ಹೊಸ ಮಾಲೀಕರನ್ನು ಪಡೆಯುಲಿದೆ.
2026 ರ ಐಪಿಎಲ್ ಪ್ರಾರಂಭವಾಗುವ ಮೊದಲು ಹಾಲಿ ಚಾಂಪಿಯನ್ ತಂಡ ಆರ್ಸಿಬಿ ಮಾಲಿಕತ್ವ ಬದಲಾಗುವ ಎಲ್ಲಾ ಸಾಧ್ಯತೆಗಳಿವೆ.
ಡಿಯಾಜಿಯೊ ಇಂಡಿಯಾ ಪ್ರಸ್ತುತ ಆರ್ಸಿಬಿಯನ್ನು ಮಾಲಿಕತ್ವ ಹೊಂದಿದೆ. ಅದು ಈಗ ತನ್ನ ಎಲ್ಲ ಪಾಲನ್ನು ಮಾರಾಟ ಮಾಡಲು ಮುಂದಾಗಿದೆ. ಐಪಿಎಲ್ 2026 ಸೀಸನ್ ಪ್ರಾರಂಭವಾಗುವ ಮೊದಲು ಅವರು ತಂಡದ ಮಾಲಿಕತ್ವದಿಂದ ನಿರ್ಗಮಿಸಲು ಯೋಚಿಸಿದ್ದಾರೆ. ಈ ಪ್ರಕ್ರಿಯೆ ಮಾರ್ಚ್ 31 ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಇದೇ ಹೊತ್ತಿನಲ್ಲಿ ಸದ್ಯ ಬಂದ ಸುದ್ದಿ ಪ್ರಕಾರ ಹೊಂಬಾಳೆ ಫಿಲ್ಮ್ಸ್ ಆರ್ಸಿಬಿಯ ಸಹ-ಮಾಲೀಕರಾಗಲಿದೆ.
ಸಿನಿಮಾ ನಿರ್ಮಾಣದಲ್ಲಿ ಈಗಾಗಲೇ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಹೊಂಬಾಳೆ ಪ್ರೊಡಕ್ಷನ್ಸ್ ಕನ್ನಡ ಬ್ಲಾಕ್ಬಸ್ಟರ್ ಚಿತ್ರಗಳನ್ನು ನೀಡಿದೆ. ಕೆಜಿಎಫ್, ಕಾಂತಾರ ಮತ್ತು ಸಲಾರ್ನಂತಹ ಸೂರ್ ಹಿಟ್ ಚಿತ್ರಗಳು ಅವರ ಪಾಲಿನಲ್ಲಿದೆ. ಈ ಚಿತ್ರಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಭರ್ಜರಿ ಕಲೆಕ್ಷನ್ ಮಾಡಿ , ಹಲವಾರು ದಾಖಲೆಗಳನ್ನು ಮುರಿದಿವೆ.
ಹೊಂಬಾಳೆ ಪ್ರೊಡಕ್ಷನ್ಸ್ 2023 ರಿಂದ ಆರ್ಸಿಬಿಗೆ ಡಿಜಿಟಲ್ ಪಾಲುದಾರರಾಗಿ ಕೆಲಸ ಮಾಡುತ್ತಿದೆ. ಈ ಸಂಬಂಧವು ಮುಂದಿನ ಋತುವಿಗೆ ಮಾಲೀಕತ್ವದ ಪರಿವರ್ತನೆಗೆ ದಾರಿ ಮಾಡಿಕೊಟ್ಟಿದೆ.
ವಿಜಯ್ ಕಿರಗಂದೂರು ಮತ್ತು ಚಲುವೇಗೌಡ ಆರಂಭಿಸಿರುವ ಹೊಂಬಾಳೆ ಫಿಲ್ಮ್ಸ್ ಈಗ ಕ್ರಿಕೆಟ್ಗೂ ಎಂಟ್ರಿ ಆಗುತ್ತಿರುವುದು ಆರ್ಸಿಬಿ ಅಭಿಮಾನಿಗಳಿಗೆ ಅಶ್ಚರ್ಯವೂ ಹೌದು.
ಕಳೆದ ಸಾಲಿನಲ್ಲಿ ಚಾಂಪಿಯನ್ ಆದ ಬಳಿಕ ಆರ್ಸಿಬಿಯ ಮೌಲ್ಯ 17 ಸಾವಿರ ಕೋಟಿ ರೂ.ಗಳೆಂದು ಅಂದಾಜಿಸಲಾಗಿತ್ತು. ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಆರ್ಸಿಬಿ ತಂಡಕ್ಕೆ ದೊಡ್ಡ ಮೌಲ್ಯವನ್ನು ತಂದು ಕೊಟ್ಟಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಜೊತೆಯಲ್ಲಿ ಐಪಿಎಲ್ನಲ್ಲಿ ಅತೀ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ತಂಡ ಆರ್ಸಿಬಿ.
ಮುಂದಿನ ನಾಲ್ಕೈದು ವರ್ಷಗಳಲ್ಲಿ ವಿರಾಟ್ ಕೊಹ್ಲಿ ಕ್ರಿಕೆಟ್ನಿಂದ ನಿವೃತ್ತರಾಗುವುದು ಖಚಿತ. ಹಾಗಾಗಿ ಸ್ಟಾರ್ ಮೌಲ್ಯವನ್ನು ಹೊಂದಿರುವ ಸಂದರ್ಭದಲ್ಲೇ ಮಾಲಿಕತ್ವದಿಂದ ಹೊರ ಬರಲು ಡಿಯಾಜಿಯೊ ಚಿಂತಿಸುತ್ತಿದೆ ಎನ್ನವಾಗಿದೆ.
ಆರ್ಸಿಬಿ ತಂಡವನ್ನು ಖರೀದಿಸಲು ಈಗಾಗಲೇ ಹಲವಾರು ಬಹು ದೊಡ್ಡ ಉದ್ಯಮಿಗಳು , ಉದ್ಯಮ ಸಂಸ್ಥೆಗಳು ಆಸಕ್ತಿಯನ್ನು ವ್ಯಕ್ತಪಡಿಸಿದ್ದವು. ಜರೋದಾದ ನಿಖಿಲ್ ಕಾಮತ್, ಅದಾನಿ ಗ್ರೂಪ್ ಮತ್ತು ಜೆಎಸ್ಡಬ್ಲ್ಯೂ ಗ್ರೂಪ್ ,ಸೀರಮ್ ಇನ್ಸ್ಟಿಟ್ಯೂಟ್ನ ಅಡಾರ್ ಪೂನವಾಲಾ , ಮಣಿಪಾಲ ಗ್ರೂಪಿನ ಡಾ ರಂಜನ್ ಪೈ
ಆಸಕ್ತರಾಗಿದ್ದರು.
News @ your fingertips
More Stories
ಫೆ.1 ಬಜೆಟ್ , ಷೇರು ಮಾರುಕಟ್ಟೆ ಕೂಡಾ ಓಪನ್
ಜಿಗಿತ ಕಂಡ ಎಂಆರ್ಪಿಎಲ್ ಲಾಭ, ಷೇರು ಬೆಲೆ ಕೂಡಾ ಜಂಪ್
ಮಾದರಿಯಾದ ಬಾಸ್ ಏನು ಅನ್ನುತ್ತಿರಾ ?