7 rupees

News @ your fingertips

ಅನಿಶ್ಚಿತಗೊಂಡ ಕಾಮನ್‌ವಲ್ತ್ ಗೇಮ್ಸ್

ಅನಿಶ್ಚಿತಗೊಂಡ ಕಾಮನ್‌ವಲ್ತ್ ಗೇಮ್ಸ್

2026ರ ಕಾಮನ್‌ವೆಲ್ತ್ ಕ್ರೀಡಾ ಕೂಟದ ಅತಿಥ್ಯ ವಹಿಸಲು ಮಲೇಶಿಯಾ ನಿರಾಕರಿಸಿದೆ.
ಕ್ರೀಡಾಕೂಟ ಆಯೋಜಿಸಲು ಅಗತ್ಯವಿರುವ ಹಣಕಾಸು ವ್ಯವಸ್ಥೆ ಇಲ್ಲದಿರುವುದು , ಅಷ್ಟು ವೆೆಚ್ಚನಿಂದ ದೇಶದ ಅರ್ಥಿಕತೆ ಮೇಲಾಗುವ ಪರಿಣಾಮಗಳನ್ನು ಗಮನಿಸಿ ಕ್ರೀಡಾಕೂಟದ ಅತಿಥ್ಯ ವಹಿಸಿಕೊಳ್ಳಲು ಸಾಧ್ಯವಿಲ್ಲದಾಗಿದೆ ಎಂದು ದೇಶದ ಕ್ರೀಡಾ ಸಚಿವರು ಶುಕ್ರವಾರ ಹೇಳಿದ್ದಾರೆ.ಅತೀಯಾದ ವೆಚ್ಚದ ಕಾರಣಕ್ಕೆ ಅಸ್ಟ್ರೇಲಿಯಾದ ಸ್ಟೇಟ್ ಆಫ್ ವಿಕ್ಟೋರಿಯಾ ಕ್ರೀಡಾಕೂಟನ್ನು ನಡೆಸಲು ಕಷ್ಟ ಸಾಧ್ಯವೆಂದು ಕೈ ಚೆಲ್ಲಿತ್ತು. ಇದಾದ ಬಳಿಕ ಕಾಮನ್‌ವೆಲ್ತ್ ಫೆಡರೇಷನ್ ಕ್ರೀಡಾಕೂಟ ನಡೆಸಿಕೊಡುವಂತೆ ಮಲೇಶಿಯಾವನ್ನು ಕೇಳಿಕೊಂಡಿತ್ತು. ಜೊತೆಯಲ್ಲಿ ಕ್ರೀಡಾ ಕೂಟ ನಡೆಸಲು 126 ಮಿಲಿಯನ್ ಡಾಲರ್ ಸಹಾಯಧನ ನೀಡುವುದಾಗಿ ಹೇಳಿತ್ತು. ಅದರೆ ಫೆಡರೇಷನ್ ನೀಡುವ ಈ ಸಹಾಯಧನಕ್ಕಿಂತ ಕ್ರೀಡಾಕೂಟದ ಒಟ್ಟು ವೆಚ್ಚ ಅತ್ಯಧಿಕವಾಗಿದೆ. ಅದನ್ನು ಸರಿದೂಗಿಸಲು ಮಲೇಶಿಯಾದಿಂದ ಸಾಧ್ಯವಿಲ್ಲ ಎಂದು ಸಚಿವರು ವಿವರಿಸಿದ್ದಾರೆ

× Subscribe us