News @ your fingertips
News @ your fingertips
ಅಂಬಾಸಿಡರ್ ಕಾರು ಒಂದು ಕಾಲದ ರಾಜ. ರಸ್ತೆ ಮೇಲೆ ಅದರ ಸೊಬಗು ನೋಡಿದವರೇ ಬಲ್ಲರು. ತಂತ್ರಜ್ಞಾನದ ವೇಗಕ್ಕೆ ಅಂಬಾಸಿಡರ್ ಕಾರು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಾ ಬಂತು. ಹೊ ಹೊಸ ಮಾದರಿಯ ಕಾರುಗಳ ಭರಾಟೆಗೆ ಸ್ಪರ್ಧಿಸಲಾರದೆ ಮುಂದೊಂದು ದಿನ ಅಂಬಾಸಿಡರ್ ಕಾರಿನ ಉತ್ಪಾದನೆಯನ್ನು ನಿಲ್ಲಿಸಿ ಬಿಟ್ಟಿತು ಹಿಂದೂಸ್ತಾನ್ ಮೋಟಾರ್ಸ್.
ಈಗ ಮತ್ತೆ ಅಂಬಾಸಿಡರ್ ಕಾರಿನ ಸದ್ದು ಕೇಳಿ ಬರುತ್ತಿದೆ. ಎಲ್ಲವೂ ಯೋಜನೆಯಂತೆ ನಡೆದರೆ ಅಂಬಾಸಿಡರ್ ಕಾರು ಹೊಸ ವಿನ್ಯಾಸ , ಹೊಸ ತಂತ್ರಜ್ಞಾನದೊಂದಿಗೆ ಜಗತ್ತಿನ ಇಂದಿನ ಅಗತ್ಯಗನುಗುಣವಾಗಿ ರೂಪುಗೊಂಡು ಹೊಸ ವರ್ಷದಲ್ಲಿ ಮಾರುಕಟ್ಟೆಗೆ ಬರುವ ನಿರೀಕ್ಷೆಗಳಿವೆ.
ಹೊಸ ಮಾದರಿ ಅಂಬಾಸಿಡರ್ ವಿದ್ಯುತ್ ಚಾಲಿತ ಸೆಡಾನ್ ಆಗಿ ಪುನರುಜ್ಜೀವನಗೊಳಿಸಲಾಗುತ್ತಿದೆ ಎನ್ನುವುದು ಸದ್ಯದ ಮಾಹಿತಿ. 2026 ರ ಮಾರ್ಚ್ನಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.
ಮೂಲ ಅಂಬಾಸಿಡರ್ನ ಉತ್ಪಾದನೆಯು 2014 ರಲ್ಲಿ ಕೊನೆಗೊಂಡಿತ್ತು. ಹಿಂದೂಸ್ತಾನ್ ಮೋಟಾರ್ಸ್ ಈಗ ಮತ್ತೆ ಈ ಕಾರನ್ನು ಆಧುನಿಕ ಜಗತ್ತಿನ ಬಯಕೆಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸುತ್ತಿದೆ. ಬೆಲೆ ಸುಮಾರು 10-15 ಲಕ್ಷ ರೂ.ಗಳ ಅಸುಪಾಸಿನಲ್ಲಿರಬಹುದು ಎನ್ನುವುದು ಅಂದಾಜು.
ಹೊಸ ಅಂಬಾಸಿಡರ್ ಆಧುನಿಕ, ಪ್ರೀಮಿಯಂ ಒಳ ವಿನ್ಯಾಸ ಮತ್ತು ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಕ್ಲಾಸಿಕ್ ಸಿಲೂಯೆಟ್ ಅನ್ನು ಹೊಂದಿರುತ್ತದೆ.
360 ಡಿಗ್ರಿ ಕ್ಯಾಮೆರಾ ಮತ್ತು ಅಧಿಕ ಏರ್ಬ್ಯಾಗ್ಗಳು ಸೇರಿದಂತೆ ವರ್ಧಿತ ಸುರಕ್ಷತಾ ಕ್ರಮಗಳನ್ನು ಹೊಂದುವ ಕಾರು ವಿಶಾಲವಾದ ಹಿಂಭಾಗದ ಆಸನ, ಅನುಕೂಲಕರವಾದ ಡೋರ್ನೊಂದಿಗೆ ರೂಪುಗೊಳ್ಳುವ ಸಾಧ್ಯತೆಗಳಿವೆ.
ಹೊಸ ವಿನ್ಯಾಸದ ಎಲೆಕ್ಟ್ರಿಕ್ಅಂಬಾಸಿರ್ ಕಾರು ಮಾರುಕಟ್ಟೆಯಲ್ಲಿ ದೊಡ್ಡ ನಿರೀಕ್ಷೆಯನ್ನು ಹುಟ್ಟಿಸಿದೆ. ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಟಾಟಾ ಟಿಗೋರ್ ಇವಿ ಮತ್ತು ಸಿಟ್ರೊಯೆನ್ ಇಸಿ3 ಮಾದರಿಯ ಇತರ ಎಲೆಕ್ಟ್ರಿಕ್ ವಾಹನಗಳಿಗೆ ಸ್ಪರ್ಧೆ ನೀಡುವ ಸಾಧ್ಯತೆಗಳಿವೆ.
.
More Stories
ರಿಲಯನ್ಸ್ ಇನ್ಫ್ರಾ , ಪವರ್ ಷೇರುಗಳು ಏರಿಕೆ
ಭಾರತದಲ್ಲಿ ಜೇನ್ ಸ್ಟ್ರೀಟ್ ವಹಿವಾಟು ನಿಷೇಧ
ವಾಯುಪಡೆಗೆ ಮಾರ್ಚ್ನಲ್ಲಿ ಮತ್ತಷ್ಟು ‘ತೇಜಸ್ ’