News @ your fingertips
News @ your fingertips
ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ತಮ್ಮ ನಿವಾಸದಲ್ಲಿ ಆಪರೇಷನ್ ಸಿಂಧೂರ್ನ ಸರ್ವಪಕ್ಷ ನಿಯೋಗದ ಸದಸ್ಯರನ್ನು ಭೇಟಿ ಮಾಡಿ , ವಿವರಗಳನ್ನು ಪಡೆದುಕೊಂಡರು.
ಪಾಕಿಸ್ತಾನ ದಶಕಗಳಿಂದ ಭಯೋತ್ಪಾದನೆಯನ್ನು ಉತ್ತೇಜಿಸುತ್ತಿರುವುದು ಜೊತೆಯಲ್ಲಿ ಆಪರೇಷನ್ ಸಿಂಧೂರ್ ನಂತರ ಗಡಿಯಾಚೆಗಿನ ಭಯೋತ್ಪಾದನೆಯನ್ನು ನಿಭಾಯಿಸುವಲ್ಲಿ ಭಾರತ ಅನುಸರಿಸಿರುವ ತಂತ್ರಗಳು , ಭಾರತದ ನಿಲುವಿನ ಕುರಿತು ವಿದೇಶಿ ನಾಯಕರಿಗೆ ಮಾಹಿತಿ ನೀಡಲು ದೇಶದ ಏಳು ನಿಯೋಗಗಳು ಹಲವಾರು ದೇಶಗಳಿಗೆ ಭೇಟಿ ನೀಡಿದ್ದವು.
ಕಾಂಗ್ರೆಸ್ ಸಂಸದ ಶಶಿ ತರೂರ್, ಇತರ ಬಿಜೆಪಿ ನಾಯಕರು ಆಪರೇಷನ್ ಸಿಂಧೂರ್ನ ಸರ್ವಪಕ್ಷ ನಿಯೋಗಗಳ ನೇತೃತ್ವ ವಹಿಸಿದ್ದರು
ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ , ಭಾರತೀಯ ಜನತಾ ಪಕ್ಷದ ನಾಯಕರಾದ ರವಿಶಂಕರ್ ಪ್ರಸಾದ್ ಮತ್ತು ಪಾಂಡ, ಜನತಾದಳ (ಯುನೈಟೆಡ್) ನಾಯಕ ಸಂಜಯ್ ಝಾ, ದ್ರಾವಿಡ ಮುನ್ನೇತ್ರ ಕಳಗಂ ನಾಯಕಿ ಕನಿಮೋಳಿ ಕರುಣಾನಿ, ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ (ಶರದ್ ಪವಾರ್) ನಾಯಕಿ ಸುಪ್ರಿಯಾ ಸುಳೆ ಮತ್ತು ಶಿವಸೇನಾ ನಾಯಕಿ ಶ್ರೀಕಾಂತ ಶಿಂಧೆ ನಿಯೋಗಗಳ ನೇತೃತ್ವ ವಹಿಸಿದ್ದರು.
More Stories
ಹೊಸ ಲುಕ್ ಅಂಬಾಸಿಡರ್ ಹೊಸ ವರ್ಷಕ್ಕೆ
ರಿಲಯನ್ಸ್ ಇನ್ಫ್ರಾ , ಪವರ್ ಷೇರುಗಳು ಏರಿಕೆ
ಭಾರತದಲ್ಲಿ ಜೇನ್ ಸ್ಟ್ರೀಟ್ ವಹಿವಾಟು ನಿಷೇಧ