7 rupees

News @ your fingertips

ಪಾಕ್‌ನಲ್ಲಿ ಭೂಕಂಪ ಕೈದಿಗಳ ಪರಾರಿ

ಪಾಕಿಸ್ತಾನದ ಬಂದರು ನಗರ ಕರಾಚಿಯಲ್ಲಿ ಭೂಕಂಪದ ನಂತರ ಅಲ್ಲಿನ ಹೈ ಸೆಕ್ಯುರಿಟಿ ಜೈಲಿನಲ್ಲಿ ಉಂಟಾದ ಅವ್ಯವಸ್ಥೆಯ ಬಳಿಕ 200 ಕ್ಕೂ ಹೆಚ್ಚು ಕೈದಿಗಳು ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.
ಪರಾರಿಯಾಗಿರುವ ಕೈದಿಗಳು ಸ್ವಯಂಪ್ರೇರಣೆಯಿಂದ ಹಿಂತಿರುಗಿದರೆ, ಸರ್ಕಾರವು ಅವರ ಶಿಕ್ಷೆಯನ್ನು ಕಡಿಮೆ ಮಾಡುವ ಬಗ್ಗೆ ಪರಿಗಣಿಸುತ್ತದೆ. ಇಲ್ಲವಾದರೆ ಪೊಲೀಸ್ ಕಾರ್ಯಚರಣೆಯಲ್ಲಿ ಸಿಕ್ಕಿಬಿದ್ದರೆ ಅವರನ್ನು ಭಯೋತ್ಪಾದನಾ ವಿರೋಧಿ ಕಾನೂನುಗಳ ಅಡಿಯಲ್ಲಿ ವಿಚಾರಣೆಗೆ ಒಳಪಡಿಸಲಾಗುತ್ತದೆ ಎಂದು ಸಿಂಧ್ ಗೃಹ ಸಚಿವ ಜಿಯಾ-ಉಲ್ ಹಸನ್ ಲಂಜಾರ್ ಎಚ್ಚರಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಸೋಮವಾರ ರಾತ್ರಿ ಕಡಿಮೆ ತೀವ್ರತೆಯ ಮೂರು ಭೂಕಂಪಗಳು ಸಂಭವಿಸಿದ ಪರಿಣಾಮ ಕರಾಚಿಯ ಮಾಲಿರ್ ಜೈಲಿನಲ್ಲಿ ನಡುಕದ ಅನುಭವವಾಗಿತ್ತು , ಇದಾದ ಬಳಿಕ ನೂರಾರು ಕೈದಿಗಳು ತಮ್ಮ ಸೆಲ್‌ಗಳ ಬಾಗಿಲುಗಳನ್ನು ಮುರಿದು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಂಪನದ ನಂತರ, ಕೈದಿಗಳು ಭಯಭೀತರಾಗಿ ತಮ್ಮ ಸೆಲ್‌ಗಳಿಂದ ಹೊರಬರಲು ಹಿಂಸಾಚಾರವನ್ನು ನಡೆಸಿದ್ದರು ಎಂದು ಪಿಟಿಐ ವರದಿ ಮಾಡಿದೆ.