7 rupees

News @ your fingertips

ಯುಎಸ್ ತನಿಖೆ , ಅದಾನಿ ಷೇರುಗಳು ಕುಸಿತ


ಅದಾನಿ ಸಮೂಹ ಸಂಸ್ಥೆಗಳ ಕುರಿತಂತೆ ಯುಎಸ್ ನ್ಯಾಯಾಂಗ ಇಲಾಖೆ ತನಿಖೆ ಆರಂಭಿಸಿದೆ ಎನ್ನುವ ಸುದ್ದಿ ಹಿನ್ನಲೆಯಲ್ಲಿ ಮಂಗಳವಾರ ಅದಾನಿ ಎಂಟರ್‌ಪ್ರೈಸಸ್ , ಅದಾನಿ ಪೋರ್ಟ್ಸ್ ಮತ್ತು ಎಸ್‌ಇಝಡ್, ಅದಾನಿ ಪವರ್ ಸೇರಿದಂತೆ ಅದಾನಿ ಸಮೂಹದ ಹಲವು ಕಂಪೆನಿಗಳ ಷೇರುಗಳು ಶೇ.2 ರಷ್ಟು ಕುಸಿತ ಕಂಡಿವೆ.
ಅದಾನಿ ಸಂಸ್ಥೆಗಳು ಮುಂದ್ರಾ ಬಂದರಿನ ಮೂಲಕ ಇರಾನಿನ ಎಲ್‌ಪಿಜಿಯನ್ನು ಭಾರತಕ್ಕೆ ಆಮದು ಮಾಡಿಕೊಳ್ಳುವ ಸಂದರ್ಭದಲ್ಲಿ ನಿರ್ಬಂಧಗಳನ್ನು ಉಲ್ಲಂಘಿಸಿವೆ ಎಂದು ಯುಎಸ್ ಪ್ರಾಸಿಕ್ಯೂಟರ್‌ಗಳು ತನಿಖೆ ನಡೆಸುತ್ತಿದ್ದಾರೆ ಎಂದು ಸೋಮವಾರ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿತ್ತು.
ಈ ವರದಿಯನ್ನು ಸೋಮವಾರವೇ ಅದಾನಿ ಸಮೂಹ ಸಂಸ್ಥೆ ನಿರಾಕರಿಸಿದ್ದರೂ , ಮಂಗಳವಾರ ಆ ಕಂಪೆನಿಗಳು ಮಾರಾಟ ಒತ್ತಡಕ್ಕೊಳಗಾಗಿವೆ.ಅದಾನಿ ಎಂಟರ್‌ಪ್ರೈಸಸ್ ಷೇರು ಬೆಲೆ ಶೇ. 2.63 , ಅದಾನಿ ಪೋರ್ಟ್ಸ್ ಷೇರು ಬೆಲೆ ಶೇ 2.72% ರಷ್ಟು ಕುಸಿದಿದೆ. ಅದಾನಿ ಟೋಟಲ್ ಗ್ಯಾಸ್ , ಅದಾನಿ ಗ್ರೀನ್ ಎನರ್ಜಿ, ಅದಾನಿ ಎನರ್ಜಿ ಸೊಲ್ಯೂಷನ್ಸ್ ಮತ್ತು ಅದಾನಿ ಪವರ್ ಷೇರುಗಳು ಶೇ 1ರಿಂದ 2 ರಷ್ಟು ಇಳಿದಿವೆ.
ಈ ನಡುವೆ ಅದಾನಿ ಸೂಮಹ ಸಂಸ್ಥೆ ವರದಿಯನ್ನು ತಳ್ಳಿಹಾಕಿದೆ. ಇದು ಆಧಾರರಹಿತ . ಈ ವಿಷಯದ ಬಗ್ಗೆ ಯಾವುದೇ ತನಿಖೆಯ ಬಗ್ಗೆ ತನಗೆ ತಿಳಿದಿಲ್ಲ ಎಂದು ಸ್ಪಷ್ಟೀಕರಿಸಿದೆ.