7 rupees

News @ your fingertips

ಹೊಸ ಸಂಕಷ್ಟದಲ್ಲಿ ಅದಾನಿ


ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಹೊಸತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಅದಾನಿ ಕಂಪನಿಗಳು ಗುಜರಾತ್‌ನ ಮುಂದ್ರಾ ಬಂದರಿನ ಮೂಲಕ ಇರಾನಿನ ಪೆಟ್ರೋಕೆಮಿಕಲ್ ಉತ್ಪನ್ನಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳುವ ಮೂಲಕ ಅಮೆರಿಕದ ನಿರ್ಬಂಧಗಳನ್ನು ಉಲ್ಲಂಘಿಸಿವೆಯೇ ಎಂದು ಅಮೆರಿಕದ ಪ್ರಾಸಿಕ್ಯೂಟರ್‌ಗಳು ತನಿಖೆ ಅರಂಭಿಸಿದ್ದಾರೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ಸೋಮವಾರ ವರದಿ ಮಾಡಿದೆ.
ಇದು ನಿಜವಾದ ಪಕ್ಷದಲ್ಲಿ ಅದಾನಿ ಅವರು ಹೊಸತೊಂದು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳಿವೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅದಾನಿ ಸಮೂಹ ನಿರ್ಬಂಧಗಳನ್ನು ತಪ್ಪಿಸುವ ಮೂಲಕ ಇರಾನಿನ ಎಲ್‌ಪಿಜಿ ಆಮದು ಮಾಡಿಕೊಳ್ಳುವ ಯಾವ ಪ್ರಯತ್ನ ನಡೆದಿಲ್ಲ ಎಂದು ಸ್ಪಷ್ಟವಾಗಿ ನಿರಾಕರಿಸಿದೆ. ಜೊತೆಯಲ್ಲಿ ಇಂತಹ ತನಿಖೆಯ ಬಗ್ಗೆಯೂ ತನಗೆ ತಿಳಿದಿಲ್ಲ ಎಂದು ವಿವರಿಸಿದೆ.
ಅದಾನಿ ಬಂದರು ಮತ್ತು ಎಸ್‌ಇಜೆಡ್ ಲಿಮಿಟೆಡ್ ನಿರ್ವಹಿಸುವ ಮುಂದ್ರಾ ಬಂದರು ಮತ್ತು ಪರ್ಷಿಯನ್ ಕೊಲ್ಲಿಯ ನಡುವೆ ಟ್ಯಾಂಕರ್‌ಗಳು ಪ್ರಯಾಣಿಸುತ್ತಿರುವುದು ಕಂಡುಬಂದಿದೆ .ಅದಾನಿ ಎಂಟರ್‌ಪ್ರ್ರೈೈೆೆಸಸ್‌ಗೆ ಸರಕುಗಳನ್ನು ಸಾಗಿಸಲು ಬಳಸಲಾಗುತ್ತಿದ್ದ ಹಲವಾರು ಎಲ್‌ಪಿಜಿ ಟ್ಯಾಂಕರ್‌ಗಳ ಚಟುವಟಿಕೆಗಳನ್ನು ಯುಎಸ್ ಎ ನ್ಯಾಯ ಇಲಾಖೆ ಪರಿಶೀಲಿಸುತ್ತಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಅವರು ವಿದ್ಯುತ್ ಸರಬರಾಜು ಒಪ್ಪಂದಗಳನ್ನು ಪಡೆಯಲು ಲಂಚ ನೀಡಿದ್ದಾರೆ ಮತ್ತು ಯುಎಸ್‌ನಲ್ಲಿ ನಿಧಿಸಂಗ್ರಹಣೆಯ ಸಮಯದಲ್ಲಿ ಅಮೇರಿಕನ್ ಹೂಡಿಕೆದಾರರನ್ನು ದಾರಿ ತಪ್ಪಿಸಿದ್ದಾರೆ ಎಂದು ಆರೋಪಿಸಿ ಕಳೆದ ವರ್ಷ ನವೆಂಬರ್‌ನಲ್ಲಿ ಯುಎಸ್ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಈಗ ಮತ್ತೊಂದು ಈ ಹೊಸ ಬೆಳವಣಿಗೆ ನಡೆದಿದೆ.