7 rupees

News @ your fingertips

ಯೆಸ್ ಬ್ಯಾಂಕ್ ಬಂಡವಾಳ ಸಂಗ್ರಹಕ್ಕೆ ಸಿದ್ದತೆ


ಮೊನ್ನೆ ಮೊನ್ನೆ ಜಪಾನ್‌ನ ಖಾಸಗಿ ಬ್ಯಾಂಕ್‌ವೊಂದು ಯೆಸ್ ಬ್ಯಾಂಕ್‌ನಲ್ಲಿ ಷೇರು ಖರೀದಿಯಲ್ಲಿ ತೇಜಿ ಕಂಡು ಬಂದಿತ್ತು. ಸಾಕಷ್ಟು ಸಮಯದಿಂದ ಸ್ಥಿರವಾಗಿದ್ದ ಯೆಸ್ ಬ್ಯಾಂಕ್ ಷೇರುಗಳು ಏರಿಕೆ ಕಾಣಲು ಜಪಾನ್ ಬ್ಯಾಂಕ್‌ನ ಪಾಲುಗಾರಿಕೆ ಕಾರಣವಾಯಿತು.
ಯೆಸ್ ಬ್ಯಾಂಕ್ ಮತ್ತೆ ಬಂಡವಾಳ ಸಂಗ್ರಹಕ್ಕೆ ಮುಂದಾಗಿರುವ ಮತ್ತೊಂದು ಸುದ್ದಿ ಸೋಮವಾರ ಬ್ಯಾಂಕಿನ ಷೇರುಗಳು ಶೇ. 9ರಷ್ಟು ಏರಿಕೆ ಕಾರಣವಾಯಿತು.
ಮಂಗಳವಾರ ( ಜೂನ್3ರಂದು ) ಬ್ಯಾಂಕ್‌ನ ಅಡಳಿತ ಮಂಡಳಿ ಬಂಡವಾಳ ಸಂಗ್ರಹ ಕುರಿತಂತೆ ಸಭೆ ನಡೆಸಲಿದೆ. ಷೇರು ಹಂಚಿಕೆ , ಡೆಟ್ ಸೆಕ್ಯುರಿಟ್ ಅಥವಾ ಅನುಕೂಲವಾಗಬಲ್ಲ ಇನ್ನಿತರ ಯಾವುದೇ ಸೆಕ್ಯುರಿಟಿಗಳು , ಖಾಸಗಿ ವಲಯದಲ್ಲಿ ಷೇರು ಹಂಚಿಕೆ , ಅದ್ಯತಾ ಷೇರು ಹಂಚಿಕೆ ಮುಂತಾದ ಹಲವು ಬಗೆಯ ಬಂಡವಾಳ ಸಂಗ್ರಹ ಕುರಿತಂತೆ ಸಭೆಯಲ್ಲಿ ಚರ್ಚೆ ನಡೆಯಲಿದೆ.
ಇದು ಬ್ಯಾಂಕಿನ ಪ್ರಗತಿಗೆ ಸಾಕಷ್ಟು ಪೂರಕವಾಗಿದ್ದು , ಮುಂದಿನ ದಿನಗಳಲ್ಲಿ ಬ್ಯಾಂಕಿನ ಷೇರುಗಳು 25ರೂ.ಯಿಂದ 27ರೂ. ವರೆಗೆ ವಹಿವಾಟು ನಡೆಸುವ ಸಾಧ್ಯತಗಳಿವೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಂದಾಜಿಸಿದ್ದಾರೆ.