News @ your fingertips
News @ your fingertips
ವಿಶ್ವದ ಹೊಸ ಹೊಸ ರಾಷ್ಟ್ರಗಳಿಗೆ ತೆರೆದುಕೊಳ್ಳುತ್ತಿರುವ ಕರಾವಳಿಯ ಮಂಗಳೂರು ಈಗ ಸಿಂಗಾಪುರಕ್ಕೆ ನೇರ ವಿಮಾನ ಸಂಪರ್ಕ ಹೊಂದಲಿದೆ.
ಹೊಸ ವರ್ಷದ ಕೊಡುಗೆಯಾಗಿ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಮಂಗಳೂರಿನಿಂದ ಸಿಂಗಾಪುರಕ್ಕೆ ಎರಡು ನೇರ ವಿಮಾನ ಹಾರಾಟ ಆರಂಭಿಸಲಿದೆ. ಅಲ್ಲದೆ ಮಂಗಳೂರು-ನವದೆಹಲಿ, ಮಂಗಳೂರು – ಪುಣೆ ನಡುವೆಯೂ ನೇರ ವಿಮಾನ ಹಾರಾಟ ನಡೆಸಲಿದೆ.
ಮಂಗಳೂರು – ಸಿಂಗಾಪುರ ನಡೆವೆ ಜನವರಿ 21ರಿಂದ ವಿಮಾನ ಹಾರಾಟ ಆರಂಭವಾಗಲಿದೆ.
2025ರ ಫೆ.1ರಿಂದ ಮಂಗಳೂರಿನಿಂದ ದೆಹಲಿಗೆ ಪ್ರತಿದಿನ ನಾನ್ ಸ್ಟಾಪ್ ವಿಮಾನಯಾನ ಆರಂಭವಾಗಲಿದೆ. ಪ್ರತಿ ಶನಿವಾರ ಮಂಗಳೂರು- ಪುಣೆ ನಡುವೆ ಎರಡು ನೇರ ವಿಮಾನಯಾನ ಸೌಲಭ್ಯ ಕೂಡ ಆರಂಭಿಸಲಾಗುವುದು ಎಂದು ಏರ್ ಇಂಡಿಯಾ ಪ್ರಕಟಿಸಿದೆ.
ಮಂಗಳೂರಿನಿಂದ ಪ್ರತಿದಿನ ಬೆಳಗ್ಗೆ 6.40ಕ್ಕೆ ಹೊರಡುವ ವಿಮಾನ ದೆಹಲಿಗೆ 9.35ಕ್ಕೆ ತಲುಪುತ್ತದೆ. ಅದೇ ರೀತಿ ದೆಹಲಿಯಿಂದ 6.40ಕ್ಕೆ ಹೊರಡುವ ವಿಮಾನ ಮಂಗಳೂರಿಗೆ 9.35ಕ್ಕೆ ತಲುಪಲಿದೆ.
ಮಂಗಳೂರಿನಿಂದ ಪುಣೆಗೆ ಶನಿವಾರ ಬೆಳಗ್ಗೆ 8 ಗಂಟೆಗೆ ಹೊರಡುವ ವಿಮಾನ 9.25ಕ್ಕೆ ಪುಣೆ ತಲುಪಲಿದೆ. ಪುಣೆಯಿಂದ 9.55ಕ್ಕೆ ಹೊರಟು 11.40ಕ್ಕೆ ಮಂಗಳೂರು ತಲುಪಲಿದೆ. ಅದೇ ರೀತಿ ಸಂಜೆ 6.30ಕ್ಕೆ ಮಂಗಳೂರಿನಿಂದ ಹೊರಟು 8 ಗಂಟೆಗೆ ಪುಣೆ ತಲುಪಲಿದೆ. ಪುಣೆಯಿಂದ ರಾತ್ರಿ 8.35ಕ್ಕೆ ಹೊರಟು 10.05ಕ್ಕೆ ಮಂಗಳೂರು ತಲುಪಲಿದೆ.
ಮಂಗಳೂರು-ಸಿಂಗಾಪುರ ನಡುವೆ ವಿಮಾನ ಸಂಪರ್ಕ ಕಲ್ಪಿಸುವಂತೆ ಹಲವು ವರ್ಷಗಳಿಂದ ಬೇಡಿಕೆಯಿತ್ತು. ಪ್ರವಾಸೋದ್ಯಮ ದೃಷ್ಟಿಯಿಂದ ಈ ಹೊಸ ಸಂಪರ್ಕ ಹೆಚ್ಚಿನ ಮಹತ್ವ ಪಡೆದಿದೆ.
ಇದುವರೆಗೆ ಮಂಗಳೂರು ಹಾಗೂ ಕೊಲ್ಲಿ ರಾಷ್ಟಗಳ ನಡುವೆಯಷ್ಟೇ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವಿತ್ತು.
More Stories
ಹೊಸ ಲುಕ್ ಅಂಬಾಸಿಡರ್ ಹೊಸ ವರ್ಷಕ್ಕೆ
ರಿಲಯನ್ಸ್ ಇನ್ಫ್ರಾ , ಪವರ್ ಷೇರುಗಳು ಏರಿಕೆ
ಭಾರತದಲ್ಲಿ ಜೇನ್ ಸ್ಟ್ರೀಟ್ ವಹಿವಾಟು ನಿಷೇಧ