7 rupees

News @ your fingertips

ಚಿನ್ನದ ಬೆಲೆ ಹೊಸ ದಾಖಲೆ

ಚಿನ್ನ ಈಗ ಖರೀದಿಸಲೋ , ದೀಪಾವಳಿ ನಂತರ ಖರೀದಿಸಲೋ …
ದರ ಸ್ವಲ್ಪ ಕಡಿಮೆಯಾಗುವ ನಿರೀಕ್ಷೆ ಇದೆ, ಆ ಮೇಲೆ ನೋಡೋಣ ಎಂದೆಲ್ಲ ಯೋಜನೆ ಮಾಡುವವರಿಗೆ ಇಲ್ಲೊಂದು ಕಹಿ ಸುದ್ದಿ…
ಚಿನ್ನದ ಬೆಲೆ ಮತ್ತೆ ಏರಿದೆ.
ಬುಧವಾರ ಚಿನ್ನದ ಬೆಲೆ ಸರ್ವಾಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ.
ಚಿನ್ನದ ಬೆಲೆ 250ರೂ.ಯಷ್ಟು ಹೆಚ್ಚಳ ಕಂಡಿದೆ. ಮಂಗಳವಾರ 10 ಗ್ರಾಮ್ ಚಿನ್ನದ ದರ 78650 ರೂ.ಗಳಿದ್ದು , ಬುಧವಾರಕ್ಕೆ 78900 ರೂ.ಗಳಿಗೆ ಏರಿದೆ.
ಚಿನ್ನಾಭರಣ ಮಾರಾಟಗಾರರಿಂದ ನಿರಂತರ ಬೇಡಿಕೆ ಬರುತ್ತಿರುವ ಹಿನ್ನಲೆಯಲ್ಲಿ ಬೆಲೆ ಏರಿಕೆ ಕಾಣುತ್ತಿದೆ ಎಂದು ಹೇಳಲಾಗಿದೆ.
ಶೇ.99.5 ಪ್ಯೂರಿಟಿ ಹೊಂದಿರುವ ಚಿನ್ನದ ದರ ಕೂಡಾ 250 ರೂ. ಏರಿಕೆಯಾಗಿದೆ. ನಿನ್ನೆ 10 ಗ್ರಾಮ್ ಚಿನ್ನದ ಬೆಲೆ 78250 ರೂ.ಗಳಿದ್ದರೆ , ಬುಧವಾರ 78500 ರೂ.ಗಳಿಗೆ ಹಾರಿದೆ.
ಇದೇ ಹೊತ್ತಿನಲ್ಲಿ ಬೆಳ್ಳಿ ದರವೂ ಏರಿಕೆಯಾಗಿದೆ. ಮಂಗಳವಾರ ಕೆಜಿಗೆ 92500 ರೂ.ಗಳಿದ್ದ ಬೆಳ್ಳಿ ಬುಧವಾರ 93500ರೂ.ಗಳಿಗೆ ಜಂಪ್ ಹೊಡೆದಿದೆ.
ಕೈಗಾರಿಕಾ ಘಟಕಗಳು ಹಾಗೂ ನಾಣ್ಯ ತಯಾರಿಕಾ ವಲಯದಿಂದ ಹೊಸ ಬೇಡಿಕೆಗಳು ಬಂದ ಕಾರಣಕ್ಕೆ 1000 ರೂ. ಹೆಚ್ಚಳವಾಗಿದೆ.
ಮುಂದಿನ ಕೆಲ ಕಾಲ ಚಿನ್ನದ ಬೆಲೆ ಏರುಗತಿಯಲ್ಲಿರುವುದನ್ನು ನಿರೀಕ್ಷಿಸಲಾಗಿದೆ ಎನ್ನುತ್ತಾರೆ ಎಂದು ಮಾರುಕಟ್ಟೆ ತಜ್ಞರು.