News @ your fingertips
News @ your fingertips
ದೇಶದ ಐದನೇ ಸೆಮಿಕಂಡಕ್ಟರ್ ಘಟಕ ಸ್ಥಾಪನೆಗೆ ಕೇಂದ್ರ ಸರಕಾರ ಸೋಮವಾರ ಒಪ್ಪಿಗೆ ನೀಡಿದೆ.
ಗುಜರಾತ್ ಸನಂದ್‌ನಲ್ಲಿ ಕೇನ್ಸ್ ಟೆಕ್ನಾಲಜಿ ಸ್ಥಾಪಿಸಲು ಯೋಜಿಸಿರುವ ಘಟಕಕ್ಕೆ ಕೇಂದ್ರ ಸಚಿವ ಸಂಪುಟ ಅನುಮೊದನೆ ನೀಡಿದೆ.
3307 ಕೋ.ರೂ ವೆಚ್ಚದ ಈ ಯೋಜನೆ ಸೆಮಿಕಂಡಕ್ಟರ್ ಉತ್ಪಾದನೆ , ಪರೀಕ್ಷೆ , ಜೋಡಣೆ ಹಾಗೂ ಪ್ಯಾಕಿಂಗ್ ಸವಲತ್ತುಗಳನ್ನು ಹೊಂದಲಿದೆ. ದಿನಕ್ಕೆ 6.3 ಮಿಲಿಯನ್ ಚಿಪ್‌ಗಳನ್ನು ತಯಾರಿಸುವ ಸಾಮಾರ್ಥ್ಯವನ್ನು ಘಟಕ ಹೊಂದಿಲಿದೆ.
ಸುಮಾರು 47 ಎಕರೆ ಜಮೀನಿನಲ್ಲಿ ನಿರ್ಮಾಣಗೊಳ್ಳಲಿರುವ ಈ ಘಟಕದಲ್ಲಿ ರೈಲು ,ಆಟೋಮೊಬೈಲ್, ಗೃಹೋಪಯೋಗಿ ಪರಿಕರಗಳಿಗೆ ಬೇಕಾಗುವ ವಿದ್ಯುತ್ ಸಂಬಂಧಿ ಉತ್ಪನ್ನಗಳನ್ನು ಇಲ್ಲಿ ತಯಾರಿಸಲಾಗುವುದು.
ಭಾರತದಲ್ಲಿ 76000 ಕೋ. ರೂ.ಗಳ ಇಂಡಿಯ ಸೆಮಿಕಂಡ್ಟಕರ್ ಮಿಷನ್‌ದಡಿ ಆರಂಭಗೊಳ್ಳಲಿರುವ 5ನೇ ಸೆಮಿಕಂಡಕ್ಟರ್ ಘಟಕ ಇದಾಗಿದೆ. ಈಗಾಗಲೇ ಮೈಕ್ರಾನ್ , ಟಾಟಾ, ಸಿಜಿ ಪವರ್ ಘಟಕಗಳು ಈಗಾಗಲೇ ಗುಜರಾತ್‌ನಲ್ಲಿ ಕಾರ್ಯ ಆರಂಭಿಸಿವೆ. ಟಾಟಾ ಸಮೂಹ ಅಸ್ಸಾಂನಲ್ಲಿ ಆರಂಭಿಸಲು ಯೋಜಿಸಿರುವ ಇನ್ನೊಂದು ಘಟಕಕ್ಕೆ ಇತ್ತೀಚಿಗಷ್ಟೇ ಅನುಮತಿ ದೊರಕಿದೆ.
More Stories
ಮಿಡ್, ಸ್ಮಾಲ್ ಕ್ಯಾಪ್ ಸ್ಟಾಕ್ಗಳ ಕಥೆಯೇನು ?
ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ
ಮೋದಿ -ಟ್ರಂಪ್ ಭೇಟಿ , ಭಾರತಕ್ಕೆ ಲಾಭ