7 rupees

News @ your fingertips

ನ.11ಕ್ಕೆ ಹಾರಾಟ ನಿಲ್ಲಿಸಲಿರುವ ವಿಸ್ತಾರ

ವಿಸ್ತಾರ ಏರ್‌ಲೈನ್ ಹಾಗೂ ಏರ್ ಇಂಡಿಯಾ ವಿಲೀನ ಪ್ರಕ್ರಿಯೆ ಅಂತಿಮ ಹಂತ ತಲುಪಿದೆ. ಬರುವ ನವೆಂಬರ್ 11ಕ್ಕೆ ವಿಸ್ತಾರ ಏರ್‌ಲೈನ್ ತನ್ನ ಹಾರಾಟ ನಿಲ್ಲಿಸಲಿದೆ.
ಸೆಪ್ಟೆಂಬರ್ 3ರಿಂದ ವಿಸ್ತಾರ ಏರ್‌ಲೈನ್ ನ ಟಿಕೆಟ್ ಬುಕ್ಕಿಂಗ್ ಸ್ಥಗಿತಗೊಳ್ಳಲಿದೆ. ಅದರೆ ನವೆಂಬರ್ 11ರ ನಂತರದ ಪ್ರಯಾಣಕ್ಕೆ ವಿಸ್ತಾರದಲ್ಲಿ ಬುಕ್ಕಿಂಗ್ ಲಭ್ಯವಾಗದು.
ಏರ್ ಇಂಡಿಯಾ ಸಮೂಹದಲ್ಲಿ ಸಿಂಗಾಪುರ ಏರ್‌ಲೈನ್ಸ್ 2085 ಕೋ.ರೂ ನೇರ ವಿದೇಶಿ ಹೂಡಿಕೆಗೆ ಕೇಂದ್ರ ಸರಕಾರ ಒಪ್ಪಿಗೆ ನೀಡಿದ ಬಳಿಕ ವಿಸ್ತಾರ ಏರ್‌ಲೈನ್‌ನ ಬುಕ್ಕಿಂಗ್ ನಿಲ್ಲಿಸಲು ನಿರ್ಧರಿಸಲಾಗಿದೆ.
ನವೆಂಬರ್ 11ರವರೆಗೆ ವಿಸ್ತಾರ ಏರ್‌ಲೈನ್ ತನ್ನ ಸಾಮಾನ್ಯ ಹಾರಾಟ ಮುಂದುವರಿಸಲಿದೆ. ನವೆಂಬರ್ 12ರ ನಂತರದ ಪ್ರಯಾಣಕ್ಕೆ ವಿಸ್ತಾರ ಏರ್‌ಲೈನ್‌ನಲ್ಲಿ ಬುಕ್ಕಿಂಗ್ ಮಾಡಿದವರಿಗೆ ಸಹಜವಾಗಿ ಏರ್‌ಇಂಡಿಯಾ ವಿಮಾನದಲ್ಲಿ ಟಿಕೆಟ್ ಲಭ್ಯವಾಗಲಿದೆ. ಸೆಪ್ಟೆಂಬರ್ ತಿಂಗಳ ಅಂತ್ಯಕ್ಕೆ ಈ ಟಿಕೆಟ್‌ಗಳನ್ನು ಏರ್ ಇಂಡಿಯಾಕ್ಕೆ ಪರಿವರ್ತಿಸಲಾಗುವುದು. ಪ್ರಯಾಣಿಕರಿಗೆ ಈ ಬಗ್ಗೆ ಮಾಹಿತಿ ರವಾನೆಯಾಗಲಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
ಟಾಟಾ ಸಮೂಹಕ್ಕೆ ಸೇರಿದ ವಿಸ್ತಾರ ಏರ್‌ಲೈನ್ ನಷ್ಟದಲ್ಲಿದ್ದ ಕಾರಣಕ್ಕೆ 2022ರಲ್ಲೇ ಏರ್ ಇಂಡಿಯಾದಲ್ಲಿ ವಿಲೀನಗೊಳಿಸಲು ನಿರ್ಧರಿಸಲಾಗಿತ್ತು.