7 rupees

News @ your fingertips

10,300 ಕೋ. ರೂ ಷೇರು ಮಾರಾಟಕ್ಕೆ ಹೊರಟ ಇಂಡಿಗೋ ಏರ್‌ಲೈನ್ಸ್‌ನ ಪ್ರವರ್ತಕ

ಇಂಡಿಗೋ ಏರ್‌ಲೆನ್ಸ್‌ನ ಸಹ ಸಂಸ್ಥಾಪಕ , ಪ್ರವರ್ತಕ ರಾಕೇಶ್ ಗಂಗವಾಲಾ ಅವರು ಕಂಪೆನಿಯಲ್ಲಿನ ತನ್ನ ಪಾಲಿನ 10,300 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡುವ ಚಿಂತನೆ ನಡೆಸಿದ್ದಾರೆ.
ರಾಕೇಶ್ ಗಂಗವಾಲಾ ಇಂಡಿಗೋ ಏರ್‌ಲೈನ್ಸ್ ನ ಮಾತೃಸಂಸ್ಥೆ ಇಂಟರ್‌ಗ್ಲೋಬಿ ಏವಿಯೇಷನ್‌ನಲ್ಲಿ ಸದ್ಯ ಶೇ.5.89 ಪಾಲನ್ನು ಹೊಂದಿದ್ದಾರೆ. ರಾಕೇಶ್ ಅವರ ಪತ್ನಿ ಶೋಭಾ ಗಂಗವಾಲಾ ಮತ್ತು ಜೆಪಿ ಮೊರ್ಗಾನ್ ಟ್ರಸ್ಟ್ ಶೇ.13.49 ಷೇರುಗಳನ್ನು ಹೊಂದಿದ್ದಾರೆ.
ರಾಕೇಶ್ ಗಂಗವಾಲಾ 2022ರಲ್ಲಿ ಇಂಟರ್‌ಗ್ಲೋಬಿ ಏವಿಯೇಷನ್‌ನ ಅಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇದಾದ ಬಳಿಕ ಕಂಪೆನಿಯಲ್ಲಿ ತನ್ನ ಕುಟುಂಬದ ಪಾಲನ್ನು ಮುಂದಿನ 5 ವರ್ಷಗಳಲ್ಲಿ ಕಡಿಮೆ ಮಾಡುವುದಾಗಿ ಪ್ರಕಟಿಸಿದ್ದರು.
ಪ್ರತಿ ಷೇರಿಗೆ 4593 ರೂ.ಗಳಂತೆ ಒಪನ್ ಮಾರುಕಟ್ಟೆಯಲ್ಲಿ ಷೇರುಗಳನ್ನು ಮಾರಾಟ ಮಾಡಲು ರಾಕೇಶ್ ನಿರ್ಧರಿಸಿದ್ದಾರೆ.
ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆಯಾಗಿರುವ ಇಂಡಿಗೋ ಸದ್ಯ ಉತ್ತಮ ಸಾಧನೆಯನ್ನು ಮಾಡುತ್ತಿದೆ.ಹಲವು ವರ್ಷಗಳಿಂದ ನಷ್ಟದಲ್ಲಿದ್ದ ಕಂಪನಿ ಕಳೆದ ಅರ್ಥಿಕ ವರ್ಷದಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿದ್ದು 8,167.49 ಕೋ.ರೂ.ಗಳ ಲಾಭವನ್ನು ದಾಖಲಿಸಿತ್ತು.

× Subscribe us