7 rupees

News @ your fingertips

ಕೃಷಿ , ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಜಿಯೋ ಎಐ ತಂತ್ರಜ್ಞಾನ

ರಿಲಯನ್ಸ್ ಇಂಡಸ್ಟ್ರಿಯ ಟೆಲಿಕಾಂ ಹಾಗೂ ಇಂಟರ್‌ನೆಟ್ ಸಹಸಂಸ್ಥೆ ಜಿಯೋ ಮುಂಬರುವ ದಿನಗಳಲ್ಲಿ ಎಐ ತಂತ್ರಜ್ಞಾನವನ್ನು ಬಳಸಿ ಅಭಿವೃದ್ದಿಗೆ ದೊಡ್ಡ ಕೊಡುಗೆ ನೀಡಲು ಸಿದ್ದವಾಗಿದೆ.
ರಿಲಯನ್ಸ್ ಇಂಡಸ್ಟ್ರಿಯ 47ನೇ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಂಪೆನಿಯ ಸಿಎಂಡಿ ಮುಕೇಶ್ ಅಂಬಾನಿ , ಕೃತಕ ಬುದ್ದಿಮತ್ತೆ ತಂತ್ರಜ್ಞಾನ ( ಎಐ ) ರಿಲಯನ್ಸ್‌ನ ಅಭಿವೃದ್ದಿಯ ಮಹತ್ತರ ಭಾಗವಾಗಿದೆ. ಜಿಯೋ ಮುಂದಿನ ದಿನಗಳಲ್ಲಿ ಈ ಹೊಸ ತಂತ್ರಜ್ಞಾನ ಬಳಸಿ ಕೃಷಿ , ಶಿಕ್ಷಣ , ಆರೋಗ್ಯ ಹಾಗೂ ಸಣ್ಣ ಕೈಗಾರಿಕಾ ಕ್ಷೇತ್ರಗಳಲ್ಲಿ ಮಹತ್ತರ ಪಾತ್ರ ವಹಿಸಲಿದೆ ಎಂದು ವಿವರಿಸಿದರು.
ಕೃಷಿ:
ಎಐ ತಂತ್ರಜ್ಞಾನದ ಮೂಲಕ ಕೃಷಿ ಕ್ಷೇತ್ರದಲ್ಲಿ ರೈತರಿಗೆ ಅನುಕೂಲವಾಗುವ ಪರಿಕರಗಳನ್ನು ಒದಗಿಸಲಿದೆ. ವಾತಾವರಣ ಕುರಿತಂತೆ ನಿಖರ ಮಾಹಿತಿ , ರೋಗ ನಿರ್ವಹಣೆ ಕುರಿತ ವಿವರಣೆ ಮುಂತಾದ ಹಲವು ನೆರವುಗಳನ್ನು ಸಕಾಲದಲ್ಲಿ ರೈತರಿಗೆ ಒದಗಿಸುವ ಕಾರ್ಯ ನಿರ್ವಹಿಸಲಿದೆ.
ಶಿಕ್ಷಣ:
ದೇಶಾದ್ಯಂತ ಇರುವ ಮಕ್ಕಳಿಗೆ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಕುರಿತಂತೆ ವಿವರಗಳನ್ನು ಒದಗಿಸಲಾಗುವುದು. ವಿಶ್ವ ಮಟ್ಟದ ಕೌಶಲ್ಯ ಹೊಂದಿರುವ ಪ್ರತಿಭೆಗಳನ್ನು ರೂಪಿಸುವ ನಿಟ್ಟಿನಲ್ಲಿ ಹೊಸ ಕಾರ್ಯಕ್ರಮಗಳನ್ನು ರೂಪಿಸಲಾಗುವುದು.
ಆರೋಗ್ಯ :
ರೋಗಿಗಳಲ್ಲಿ ನಿಖರವಾಗಿ ರೋಗ ಗುರುತಿಸುವುದು. ಪ್ರಾಥಮಿಕ ಹಂತದಲ್ಲೇ ಕ್ಲಿಷ್ಟಕರವಾಗಿರುವ ರೋಗಗಳನ್ನು ಪತ್ತೆ ಹಚ್ಚುವುದು.ಅವುಗಳಿಗೆ ಸಮರ್ಪಕವಾದ ಚಿಕಿತ್ಸೆ ಒದಗಿಸುವುದು , ಪ್ರತಿಯೊಬ್ಬ ರೋಗಿಗೂ ವೈಯಕ್ತಿಕವಾದ ಆರೋಗ್ಯ ಯೋಜನೆಯನ್ನು ರೂಪಿಸಿಕೊಡುವುದು ಮುಂತಾದ ಹಲವು ಚಟುವಟಿಕೆಗಳನ್ನು ರೂಪಿಸಲಾಗುವುದು.
ಉದ್ಯಮ :
ಸಣ್ಣ ಕೈಗಾರಿಕೆಗಳಿಗೆ ಬೇಕಾಗುವ ಮಾಹಿತಿ , ತಂತ್ರಜ್ಞಾನ ಸಹಕಾರ , ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯಮವನ್ನು ಜಾಗತಿಕ ಮಟ್ಟಕ್ಕೆ ಕಂಡು ಹೋಗುವ ನೈಪುಣ್ಯತೆ ಮುಂತಾಹ ಹಲವು ಪರಿಕರಗಳನ್ನು ಎಐ ಮೂಲಕ ಜಿಯೋ ಒದಗಿಸಲಿದೆ ಎಂದು ಮುಕೇಶ್ ಅಂಬಾನಿ ವಿವರಿಸಿದರು.