News @ your fingertips
News @ your fingertips
ಚುನಾವಣಾ ಬಾಂಡ್ಗಳ ಬಗ್ಗೆ ತನಿಖೆ ನಡೆಸಲು ಕೋರ್ಟ್ ನಿಗಾದಲ್ಲಿ ವಿಶೇಷ ತನಿಖಾ ತಂಡ ( ಎಸ್ಐಟಿ ) ರಚಿಸಬೇಕೆಂಬ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ.
ಚುನಾವಣಾ ಬಾಂಡ್ಗಳ ಖರೀದಿ ಹಾಗೂ ಮಾರಾಟ ಕುರಿತಂತೆ ಎಸ್ಐಟಿ ಮೂಲಕ ತನಿಖೆ ನಡೆಸಬೇಕೆಂದು ಅರ್ಜಿದಾರರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
2018ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರ ಚುನಾವಣಾ ಬಾಂಡ್ಗಳನ್ನು ಜಾರಿ ತಂದಿತ್ತು. ರಾಜಕೀಯ ಪಕ್ಷಗಳಿಗೆ ನಗದು ರೂಪದಲ್ಲಿ ದೇಣಿಗೆ ನೀಡುವುದನ್ನು ನಿಯಂತ್ರಿಸಿ , ಪಾರದರ್ಶಕತೆ ತರುವ ನಿಟ್ಟಿನಲ್ಲಿ ಸರಕಾರ ಬಾಂಡ್ಗಳನ್ನು ಜಾರಿಗೊಳಿಸಿತ್ತು. ಈ ಕುರಿತಂತೆ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಸಾಕಷ್ಟು ಚರ್ಚೆಗಳು ಆರಂಭವಾಗಿದ್ದವು. ಕಳೆದ ಫೆಬ್ರವರಿಯಲ್ಲಿ ಈ ಬಗ್ಗೆ ನ್ಯಾಯಾಲಯದ ಕದವನ್ನು ತಟ್ಟಲಾಗಿತ್ತು.
ಚುನಾವಣಾ ಬಾಂಡ್ಗಳು ಪರೋಕ್ಷವಾಗಿ ರಾಜಕೀಯ ಪಕ್ಷಗಳು ಹಾಗೂ ಉದ್ಯಮಗಳ ನಡುವಿನ ಒಳಒಪ್ಪಂದಗಳು. ಇವುಗಳ ಬಗ್ಗೆ ವಿವರವಾದ ತನಿಖೆಯಾಗಬೇಕಿದೆ ಎಂದು ಸಿಪಿಐಎಲ್ ಸಂಸ್ಥೆ ತನ್ನ ಅರ್ಜಿಯಲ್ಲಿ ಮನವಿ ಮಾಡಿಕೊಂಡಿತ್ತು.
More Stories
ಭಾರತ ಏಕದಿನ ಕ್ರಿಕೆಟ್ ಕ್ಲೀನ್ ಸ್ವೀಪ್
ಮಾಘಿ ಪೂರ್ಣಿಮೆಗೆ ಜನಸಾಗರ
ಅಮೆರಿಕಾ ಸಾಲದಿಂದ ದೂರ ಉಳಿದ ಅದಾನಿ