News @ your fingertips
News @ your fingertips
ಐಡಿಬಿಐ ಬ್ಯಾಂಕ್ನ ಬಂಡವಾಳ ಹಿಂಪಡೆತ ಪ್ರಕ್ರಿಯೆ ವಿಳಂಬವಾಗಿರುವ ಹೊತ್ತಲ್ಲೇ ಬ್ಯಾಂಕ್ನಲ್ಲಿ ಹೂಡಿಕೆ ಮಾಡಲು ಫೇರ್ಫ್ಯಾಕ್ಸ್ ಇಂಡಿಯಾ ಹೋಲ್ಡಿಂಗ್ಸ್ ಆಸಕ್ತವಾಗಿರುವ ಸುದ್ದಿ ಬಂದಿದೆ.
ಐಡಿಬಿಐ ಬ್ಯಾಂಕ್ನಲ್ಲಿ ಹೂಡಿಕೆ ಮಾಡಲು ಮೂರು ಸಂಸ್ಥೆಗಳು ಆಸಕ್ತಿ ತಳೆದಿದ್ದವು. ಫೇರ್ಫ್ಯಾಕ್ಸ್ ಇಂಡಿಯಾ ಹೋಲ್ಡಿಂಗ್ಸ್ , ಎನ್ಬಿಡಿ ಎಮೀರೇಟ್ಸ್ , ಕೋಟಕ್ ಮಹೀಂದ್ರ ಬ್ಯಾಂಕ್ ಪ್ರಸ್ತಾವನೆಯನ್ನು ಸಲ್ಲಿಸಿದ್ದವು.
ಆರ್ಬಿಐನ ಕಠಿಣ ಮಾರ್ಗಸೂಚಿ , ಪರಿಶೀಲನೆ ನಂತರ ಫೇರ್ಫ್ಯಾಕ್ಸ್ ಅಂತಿಮ ಹಂತಕ್ಕೆ ಪ್ರವೇಶ ಪಡೆದಿದೆ ಎಂದು ಸುದ್ದಿ ಮೂಲಗಳು ತಿಳಿಸಿವೆ.
ಭಾರತ ಮೂಲದ ಕೆನಡ ನಿವಾಸಿ ಪ್ರೇಮ್ ವಾತ್ಸಾ ಅವರು ಫೇರ್ಫ್ಯಾಕ್ಸ್ ಇಂಡಿಯಾ ಹೋಲ್ಡಿಂಗ್ನ ಮಾಲಿಕರು .
ಐಡಿಬಿಐ ಬ್ಯಾಂಕ್ನಲ್ಲಿನ ಹೂಡಿಕೆ ಬಗ್ಗೆ ಆಸಕ್ತರಾಗಿರುವ ಬಿಡ್ಡರ್ಗಳನ್ನು ಅಂತಿಮಗೊಳಿಸಲಾಗಿದೆ.ಐಡಿಬಿಐ ಬ್ಯಾಂಕ್ನ ಶೇ.60.7 ಪಾಲು ಖರೀದಿಯಲ್ಲಿ ಫೇರ್ಫ್ಯಾಕ್ಸ್ ಸಂಸ್ಥೆ ಮುಂಚೂಣಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.
More Stories
ಹೊಸ ಲುಕ್ ಅಂಬಾಸಿಡರ್ ಹೊಸ ವರ್ಷಕ್ಕೆ
ರಿಲಯನ್ಸ್ ಇನ್ಫ್ರಾ , ಪವರ್ ಷೇರುಗಳು ಏರಿಕೆ
ಭಾರತದಲ್ಲಿ ಜೇನ್ ಸ್ಟ್ರೀಟ್ ವಹಿವಾಟು ನಿಷೇಧ