7 rupees

News @ your fingertips

ಐಸಿಐಸಿಐ ಬ್ಯಾಂಕ್ ಲಾಭ ಶೇ.14 ಹೆಚ್ಚಳ

ಖಾಸಗಿ ವಲಯದ ಪ್ರತಿಷ್ಠಿತ ಐಸಿಐಸಿಐ ಬ್ಯಾಂಕ್ ಪ್ರಸಕ್ತ ಅರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ 11059.1 ಕೋ.ರೂ ನಿವ್ವಳ ಲಾಭ ಗಳಿಸಿದೆ.
ಬ್ಯಾಂಕ್ ಮಾರುಕಟ್ಟೆಯ ನಿರೀಕ್ಷೆಯನ್ನು ಮೀರಿ , ಕಳೆದ ಬಾರಿಗಿಂತ ಶೇ.14.6 ರಷ್ಟು ಹೆಚ್ಚು ಲಾಭವನ್ನು ದಾಖಲಿಸಿದೆ. ಕಳೆದ ವರ್ಷ ಬ್ಯಾಂಕ್ 9648.2 ಕೋ. ರೂ. ಲಾಭ ಮಾಡಿತ್ತು.
ಬ್ಯಾಂಕಿನ ನಿವ್ವಳ ಬಡ್ಡಿ ಅದಾಯ 19552.9 ಕೋ .ರೂ ಲಾಭ ಗಳಿಸಿದೆ. ಮಾರುಕಟ್ಟೆ 19515 ಕೋ.ರೂ. ಅದಾಯ ನಿರೀಕ್ಷೆ ಮಾಡಿತ್ತು.
ಶುಕ್ರವಾರ ಬ್ಯಾಂಕ್‌ನ ಷೇರುಗಳು 1207 ರೂ.ಗಳಿಗೆ ಟ್ರೇಡ್ ಆಗಿದ್ದವು.