7 rupees

News @ your fingertips

ವಿಜಯ ಮಲ್ಯಗೆ ನಿರ್ಬಂಧ ಹೇರಿದ ಸೆಬಿ

ವಿದೇಶದಲ್ಲಿ ನೆಲೆ ನಿಂತಿರುವ ಉದ್ಯಮಿ ವಿಜಯ ಮಲ್ಯ ಅವರಿಗೆ ಷೇರು ಮಾರುಕಟ್ಟೆಯಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ವಹಿವಾಟು ಮಾಡದಂತೆ ಸೆಬಿ ಮೂರು ವರ್ಷಗಳ ನಿರ್ಬಂಧ ಹೇರಿದೆ.
ವಿಜಯ ಮಲ್ಯ ತನ್ನ ಗುರುತು ಮರೆಮಾಚಿ , ಪರೋಕ್ಷವಾಗಿ ವಿದೇಶಿ ಸಾಂಸ್ಥಿಕ ಹೂಡಿಕೆ ಕಂಪೆನಿ ಮ್ಯಾಟರ್ ಹಾರ್ನ್ ವೆಂಚರ್ಸ್‌ ಮೂಲಕ ಭಾರತ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದಾರೆ ಎನ್ನುವ ದೂರು ಬಂದಿರುವ ಹಿನ್ನಲೆಯಲ್ಲಿ ಸೆಬಿ ಈ ಕ್ರಮ ಜರಗಿಸಿದೆ.
9000 ಕೋ.ರೂ. ಸಾಲ ವಂಚನೆ ಅರೋಪ ಎದುರಿಸುತ್ತಿರುವ ವಿಜಯ ಮಲ್ಯ ಸದ್ಯ ಬ್ರಿಟನ್‌ನಲ್ಲಿ ನೆಲೆಸಿದ್ದು ,ಅವರನ್ನು ಭಾರತಕ್ಕೆ ಕರೆತರುವ ಕಾನೂನು ಹೋರಾಟ ಇನ್ನೂ ಮುಂದುವರಿದಿದೆ.
ಮಲ್ಯ ಅಕ್ರಮ ಹಾಗೂ ಅನೈತಿಕ ಮಾರ್ಗದ ಮೂಲಕ ಭಾರತದ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದಾರೆ ಎಂದು ಮನಗಂಡಿರುವ ಸೆಬಿ ಶುಕ್ರವಾರ ಈ ನಿರ್ಬಂಧದ ಅದೇಶ ಹೊರಡಿಸಿದೆ.
ವಿಜಯ ಮಲ್ಯ ಈಗಲೂ ಯುನೈಟೆಡ್ ಬ್ರುವರೀಸ್‌ನಲ್ಲಿ ಶೇ 8.1 ಹಾಗೂ ಯುನೈಟೆಡ್ ಸ್ಪಿರಿಟ್‌ನಲ್ಲಿ ಶೇ 0.01 ಪಾಲನ್ನು ಹೊಂದಿದ್ದಾರೆ.