7 rupees

News @ your fingertips

ವೋಡಾಪೋನ್ ಐಡಿಯಾ ಸೇವೆ ವಿಸ್ತರಣೆಗೆ ಸಾಲ

ಟೆಲಿಕಾಂ ರಂಗದ ಮೂರನೇ ದೊಡ್ಡ ಕಂಪೆನಿ ವೋಡಾಪೋನ್ ಐಡಿಯಾ ಭಾರತೀಯ ಬ್ಯಾಂಕ್‌ಗಳಿಂದ ಸುಮಾರು 15000 ಕೋ.ರೂ. ಸಾಲ ಪಡೆಯಲು ಮುಂದಾಗಿದೆ.
ಐಡಿಯಾ ಇತ್ತೀಚಿಗಷ್ಟೆ ಷೇರು ಮಾರುಕಟ್ಟೆಯಿಂದ 18000 ಕೋ.ರೂ.ಗಳನ್ನು ಸಂಗ್ರಹಿಸಿತ್ತು.
ಜಿಯೋ ಟೆಲಿಕಾಂ, ಭರ್ತಿ ಏರ್‌ಟೆಲ್ ಬಳಿಕ ಭಾರತದಲ್ಲಿ ಅತಿ ಹೆಚ್ಚಿನ ಗ್ರಾಹಕರನ್ನು ಹೊಂದಿರುವ ಐಡಿಯಾ ಇತ್ತೀಚಿನ ವರ್ಷಗಳಲ್ಲಿ ಅರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿತ್ತು.
ಇತರೆಡು ಟೆಲಿಕಾಂ ಕಂಪೆನಿಗಳು ಈಗಾಗಲೇ ದೇಶದಾದ್ಯಂತ 5 ಜಿ ಸೇವೆಯನ್ನು ತ್ವರಿತವಾಗಿ ವಿಸ್ತರಿಸುತ್ತಿವೆ. ಈ ಕಂಪೆನಿಗಳ ಪೈಪೋಟಿಯ ನಡುವೆ 4ಜಿ ಸೇವೆಯನ್ನು ಬಲಿಷ್ಠಗೊಳಿಸಲು ಹಾಗೂ 5ಜಿ ಸೇವೆಯನ್ನು ಗ್ರಾಹಕರಿಗೆ ನೀಡಲು ಐಡಿಯಾ ಸುಮಾರು 45 ಸಾವಿರ ಕೋ. ರೂ ಹಣ ಸಂಗ್ರಹಕ್ಕೆ ಮುಂದಾಗಿತ್ತು. ಇದಕ್ಕಾಗಿ ಎಫ್‌ಪಿಒ ಮೂಲಕ ಷೇರು ಮಾರಾಟ, ಬ್ಯಾಂಕ್‌ಗಳಿಂದ ಸಾಲ ಹಾಗೂ ವಿತ್ತೀಯ ಸಂಸ್ಥೆಗಳಿಂದ ಬಂಡವಾಳ ಸಂಗ್ರಹ ಮಾರ್ಗಗಳನ್ನು ಅನಸುರಿಸಲು ನಿರ್ಧರಿಸಿತ್ತು.
ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾ, ಬ್ಯಾಂಕ್ ಅಫ್ ಬರೋಡಾ , ಪಂಜಾಬ್ ನ್ಯಾಶನಲ್ ಬ್ಯಾಂಕ್ ಹಾಗೂ ಕೆಲವು ಖಾಸಗಿ ಬ್ಯಾಂಕಿನಿಂದ ಈ ಸಾಲ ಪಡೆಯಲು ಪ್ರಯತ್ನಗಳು ನಡೆದಿವೆ ಎಂದು ವರದಿಗಳು ತಿಳಿಸಿವೆ.

 

× Subscribe us