7 rupees

News @ your fingertips

ಐಸಿಐಸಿಐ ಬ್ಯಾಂಕ್ ಉತ್ತಮ ಫಲಿತಾಂಶ, ಲಾಭದಲ್ಲಿ ಶೇ.17 ಜಂಪ್

ಖಾಸಗಿವಲಯದ ಐಸಿಐಸಿಐ ಬ್ಯಾಂಕ್ ಕಳೆದ ಅರ್ಥಿಕ ಸಾಲಿನ ಕೊನೆಯ ತ್ರೈಮಾಸಿಕದಲ್ಲಿ ಉತ್ತಮ ಸಾಧನೆ ತೋರಿದ್ದು , 10,707 ಕೋ.ರೂ ಲಾಭ ದಾಖಲಿಸಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ಬ್ಯಾಂಕ್ 9122 ಕೋ.ರೂ ಲಾಭ ಪಡೆದಿತ್ತು. ಅದನ್ನು ಹೋಲಿಸಿದರೆ ಈ ಬಾರಿ ಶೇ.17ರಷ್ಟು ಹೆಚ್ಚುವರಿ ಲಾಭ ಗಳಿಸಿದೆ.
ಮಾರುಕಟ್ಟೆ ತಜ್ಞರು 10331 ಕೋ.ರೂ. ಲಾಭವನ್ನು ನಿರೀಕ್ಷೆ ಮಾಡಿದ್ದು , ಬ್ಯಾಂಕ್ ಸ್ವಲ್ಪ ಅಧಿಕ ಲಾಭವನ್ನೇ ದಾಖಲಿಸಿದೆ. ಇದು ಹೂಡಿಕೆದಾರರಲ್ಲಿ ಹೊಸ ಉತ್ಸಾಹ ತರುವ ನಿರೀಕ್ಷೆ ಇದೆ, ಬ್ಯಾಂಕ್ ಪ್ರತಿ ಷೇರಿಗೆ ಶೇ.10 ಡಿವಿಡೆಂಡ್ ಪ್ರಕಟಿಸಿದೆ.
ಬ್ಯಾಂಕ್‌ನ ನಿವ್ವಳ ಬಡ್ಡಿ ಅದಾಯ 19,093 ಕೋ.ರೂ.ಗಳು. ಕಳೆದ ಇದೇ ಅವಧಿಯಲ್ಲಿ 17667 ಕೋ.ರೂ.ಗಳಾಗಿತ್ತು.
ಬ್ಯಾಂಕಿನ ಒಟ್ಟು ಅನುತ್ಪಾದಕ ಆಸ್ತಿ ( ಎನ್‌ಪಿಎ) ಶೇ.2.81ರಿಂದ ಶೇ. 2.16ಕ್ಕೆ ಇಳಿದಿದೆ. ಹಿಂದಿನ ಅವಧಿಗೆ ಹೋಲಿಸಿದರೆ ಕಳೆದ ತ್ರೈಮಾಸಿಕದಲ್ಲಿ ನಿವ್ವಳ ಎನ್‌ಪಿಎ ಶೇ.0.48ರಿಂದ ಶೇ.0.42ಕ್ಕೆ ಇಳಿದಿದೆ
ಬ್ಯಾಂಕಿನ ಉತ್ತಮ ಫಲಿತಾಂಶ ಸೋಮವಾರ ಮಾರುಕಟ್ಟೆಯ ಮೇಲೆ ಪಾಸಿಟಿವ್ ಪ್ರಭಾವ ಬೀರುವ ಸಾಧ್ಯತೆಗಳಿವೆ.
.