News @ your fingertips
News @ your fingertips
ಗುರುವಾರ ವೋಡಾಪೋನ್ ಐಡಿಯಾ ಎಫ್‌ಪಿಓ ಷೇರುಗಳು ಮಾರುಕಟ್ಟೆಯಲ್ಲಿ ವಹಿವಾಟು ನಡೆಸಿದ್ದು , ದೊಡ್ಡ ಪ್ರಮಾಣದಲ್ಲಿ ಕೈ ಬದಲಾವಣೆಯಾಗಿದೆ. ಸಂಸ್ಥೆ ಎಫ್‌ಪಿಒ ಮೂಲಕ 1800 ಕೋ.ರೂ.ಗಳನ್ನು ಸಂಗ್ರಹಿಸಿತ್ತು. ಪ್ರತಿ ಷೇರಿನ ಬೆಲೆ 11 ರೂ. ನಿಗದಿ ಮಾಡಲಾಗಿತ್ತು.
ಗುರುವಾರ ಬೆಳಗ್ಗೆ ವೋಡಾಪೋನ್ ಐಡಿಯಾ ಷೇರುಗಳು 13.75 ರೂ.ಗೆ ಆರಂಭಗೊಂಡಿದ್ದು , ಗರಿಷ್ಟ 14.40 ರೂ.ಗೆ ತಲುಪಿದ್ದವು.
ಅತ್ಯಂತ ಕುತೂಹಲದ ಸಂಗತಿಯೆಂದರೆ , ಗುರುವಾರ ವಹಿವಾಟು ನಡೆಸಿದ ಐಡಿಯಾ ಷೇರುಗಳು ಸಂಖ್ಯೆ 400 ಕೋ.(ಎನ್‌ಎಸ್‌ಸಿ ಹಾಗೂ ಬಿಎಸ್‌ಸಿ) ಬುಧವಾರ 194 ಕೋ. ಷೇರುಗಳು ಟ್ರೇಡ್‌ಆಗಿರುವುದು ಇದುವರೆಗಿನ ಗರಿಷ್ಠ ಪ್ರಮಾಣ.
ಖಂಡಾವಾಲಾ ಮತ್ತು ಮೋನರ್ಕ್ ಬ್ರೋಕಿಂಗ್ ಸಂಸ್ಥೆಗಳು ವೋಡಾಪೋನ್ ಷೇರುಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ತಳೆದಿದ್ದವು.
ತೀವ್ರ ಅರ್ಥಿಕ ಸಂಕಷ್ಟದಲ್ಲಿದ್ದ ವೋಡಾಪೋನ್ ಐಡಿಯಾ ಕಂಪೆನಿ 5ಜಿ ಸೇವೆ ಸೇರಿದಂತೆ ತನ್ನ ಕಾರ್ಯಚಟುವಟಿಕೆಗಳಿಗೆ ಹೊಸ ರೂಪ ನೀಡುವ ದೃಷ್ಟಿಯಿಂದ 45ಸಾವಿರ ಕೋ.ರೂ ಬಂಡವಾಳ ಸಂಗ್ರಹಕ್ಕೆ ಮುಂದಾಗಿದೆ. ಈಕ್ವಿಟಿ ಹಾಗೂ ಸಾಲದ ರೂಪದಲ್ಲಿ ಈ ಮೊತ್ತ ಸಂಗ್ರಹಕ್ಕೆ ಕಂಪೆನಿ ಮುಂದಾಗಿದ್ದು , ಈಗ 1800 ಕೋ. ರೂ. ಈಕ್ವಿಟಿ ಮೂಲಕ ಜೋಡಿಸಿದೆ. ಇನ್ನೂ ಹಲವು ವಿತ್ತೀಯ ಸಂಸ್ಥೆಯಿಂದ ಸಾಲವನ್ನು ಪಡೆದುಕೊಂಡಿದೆ.
ದೇಶದ ಮೂರನೇ ಅತೀ ದೊಡ್ಡ ಟೆಲಿಕಾಂ ಕಂಪೆನಿಯಾಗಿರುವ ಐಡಿಯಾ ದೇಶದಾದ್ಯಂತ 5ಜಿ ಸೇವೆಯನ್ನು ತ್ವರಿತವಾಗಿ ವಿಸ್ತರಿಸಲು ಸಿದ್ದತೆಗಳನ್ನು ನಡೆಸಿಕೊಂಡಿದೆ.
18000 ಕೋ. ರೂ. ಸಂಗ್ರಹ ಐಡಿಯಾ ಕಂಪೆನಿಗೆ ಹೊಸ ಜೀವ ನೀಡಿದಂತಾಗಿದೆ.ಇದು ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಅಧ್ಯಾಯವನ್ನು ಬರೆಯಲಿದೆ ಎಂದು ಅದಿತ್ಯ ಬಿರ್ಲಾ ಸಮೂಹ ಸಂಸ್ಥೆ ಅಧ್ಯಕ್ಷ ಕುಮಾರಮಂಗಲಂ ಬಿರ್ಲಾ ಗುರುವಾರ ಎಫ್‌ಪಿಒ ಬಿಡುಗಡೆ ಸಂದರ್ಭದಲ್ಲಿ ಹೇಳಿದರು.
More Stories
ಮಿಡ್, ಸ್ಮಾಲ್ ಕ್ಯಾಪ್ ಸ್ಟಾಕ್ಗಳ ಕಥೆಯೇನು ?
ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ
ಮೋದಿ -ಟ್ರಂಪ್ ಭೇಟಿ , ಭಾರತಕ್ಕೆ ಲಾಭ