7 rupees

News @ your fingertips

ಪಶ್ಚಿಮಬಂಗಾಲ ಸರಕಾರಕ್ಕೆ ಶಾಕ್

36 ಸಾವಿರ ಶಿಕ್ಷಕ - ಶಿಕ್ಷಕೇತರ ನೇಮಕಾತಿ ರದ್ದು ಸಿಬಿಐ ತನಿಖೆಗೆ ಸೂಚಿಸಿದ ಹೈಕೋರ್ಟ್

ಲೋಕಸಭೆ ಚುನಾವಣೆ ಹೊತ್ತಲ್ಲೇ ಪಶ್ಚಿಮ ಬಂಗಾಲ ಸರಕಾರಕ್ಕೆ ದೊಡ್ಡ ಅಘಾತ ಎದುರಾಗಿದೆ. 2016ರಲ್ಲಿ ನಡೆಸಿದ್ದ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬಂದಿಗಳ ನೇಮಕಾತಿಗಳ ಕುರಿತಂತೆ ಹೈಕೋರ್ಟು ಮಹತ್ವದ ತೀರ್ಪುಪ್ರಕಟಿಸಿದೆ. ಈ ನೇಮಕಾತಿಯಲ್ಲಿ ಅವ್ಯವಹಾರಗಳು ನಡೆದಿದ್ದು ಮುಂದಿನ ತನಿಖೆಯನ್ನು ಮುಂದುವರಿಸುವಂತೆ ಸಿಬಿಐಗೆ ಹೈಕೋರ್ಟ್ ಸೂಚನೆ ನೀಡಿದೆ. ಜೊತೆಯಲ್ಲಿ ಅಂದಿನ ಎಲ್ಲ ನೇಮಕಾತಿಯನ್ನು ಕೂಡಾ ರದ್ದುಗೊಳಿಸಿದೆ.
ಈ ಹಗರಣದ ತನಿಖೆ ಸಂಬಂಧ ಈಗಾಗಲೇ ಸಿಬಿಐ ಪಶ್ಚಿಮ ಬಂಗಾಳದ ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಹಾಗೂ ಪಶ್ಚಿಮ ಬಂಗಾಳ ಸ್ಕೂಲ್ ಸವೀರ್ಸ್ ಕಮೀಷನ್‌ನ ಕೆಲವೊಂದು ಹಿರಿಯ ಅಧಿಕಾರಿಗಳನ್ನು ಬಂಧಿಸಿತ್ತು.
ಪಶ್ಚಿಮ ಬಂಗಾಳ ಸರಕಾರ 2016ರಲ್ಲಿ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬಂದಿಗಳ ನೇಮಕಾತಿ ಸಂಬಂಧ ರಾಜ್ಯದಲ್ಲಿ ಪರೀಕ್ಷೆ ನಡೆಸಿತ್ತು. ಈ ಪರೀಕ್ಷೆಯಲ್ಲಿ ಪಾಸಾದ ಕೆಲವು ವಿದ್ಯಾರ್ಥಿಗಳು ಬಳಿಕ ತಮಗೆ ಉದ್ಯೋಗ ದೊರೆತಿಲ್ಲ ಎಂದು ನ್ಯಾಯಾಲಯದ ಮೆಟ್ಟಲು ಏರಿದ್ದರು.
ವಿಚಾರಣೆ ನಡೆಸಿದ ಹೈಕೋರ್ಟ್ ಅಂದಿನ ಎಲ್ಲಾ 36000 ಶಿಕ್ಷಕ ಹಾಗೂ ಶಿಕ್ಷಕೇತರ ಸಿಬಂದಿಗಳ ನೇಮಕಾತಿಯನ್ನು ರದ್ದುಗೊಳಿಸಲು ಸೂಚನೆ ನೀಡಿದೆ.