7 rupees

News @ your fingertips

ಬಜಾಜ್ ಫೈನಾನ್ಸ್ಆರ್‌ಬಿಐ ನಿರ್ಬಂಧ ತೆರವು

ಬಜಾಜ್ ಫೈನಾನ್ಸ್ ನ ಇಕಾಮ್ ಹಾಗೂ ಇನ್ಟಾ ಇಎಂಐ ಕಾರ್ಡ್‌ಗಳ ಮೂಲಕ ಸಾಲ ಮಂಜೂರಾತಿ ಹಾಗೂ ವಿತರಣೆ ಮೇಲಿದ್ದ ನಿರ್ಬಂಧವನ್ನು ಆರ್‌ಬಿಐ ತೆರವು ಮಾಡಿದೆ.
ಡಿಜಿಟಲ್ ಮೂಲಕ ಸಾಲ ಮಂಜೂರಾತಿ ಹಾಗೂ ನೀಡಿಕೆ ಕುರಿತಂತೆ ಸರಿಯಾದ ಮಾರ್ಗಸೂಚಿ ಕ್ರಮಗಳನ್ನು ಅನುಸರಿಸುತ್ತಿಲ್ಲ ಎನ್ನುವ ಅಂಶದ ಮೇಲೆ ಬಜಾಜ್ ಫೈನಾನ್ಸ್‌ಗೆ 2023 ನವೆಂಬರ್‌ನಲ್ಲಿ ಆರ್‌ಬಿಐ ನಿರ್ಬಂಧಗಳನ್ನು ಹೇರಿತ್ತು.
ಸಾಲ ನೀಡಿಕೆ ಕುರಿತ ಎಲ್ಲ ಮಾರ್ಗಸೂಚಿಗಳನ್ನು ಸಂಸ್ಥೆ ಪರಿಪಾಲಿಸಲಿದೆ. ಹಾಗಾಗಿ ನಿರ್ಬಂಧಗಳನ್ನು ಆರ್‌ಬಿಐ ಮೇ.2ರಂದು ತೆರವು ಮಾಡಿ ಅದೇಶ ನೀಡಿದೆ. ಸಂಸ್ಥೆ ತಕ್ಷಣದಲ್ಲೇ ಸಾಲ ನೀಡಿಕೆ ಕುರಿತ ಉಪಕ್ರಮಗಳನ್ನು ಆರಂಭಿಸಲಿದೆ ಎಂದು ಪ್ರಕಟನೆ ತಿಳಿಸಿದೆ.

× Subscribe us