7 rupees

News @ your fingertips

ಟಾಟಾ ಕ್ಯಾಪಿಟಲ್‌ ಐಪಿಒ ನಿರೀಕ್ಷೆ , ಹೂಡಿಕೆಗೆ ಭರ್ಜರಿ ಅವಕಾಶ

ಹೂಡಿಕೆದಾರರಿಗೆ ಇಲ್ಲೊಂದು ಸಂತಸದ ಸುದ್ದಿ ಇದೆ.
ಈ ವರ್ಷದ ಅಂತ್ಯದೊಳಗೆ ಟಾಟಾ ಸಮೂಹದ ಮತ್ತೊಂದು ಐಪಿಒ ನಿಮ್ಮ ಮುಂದೆ ಬರಲಿದೆ.
ಇತ್ತೀಚಿಗಷ್ಟೆ ಟಾಟಾ ಟೆಕ್ನಾಲಜಿ ಐಪಿಒ ಮಾರುಕಟ್ಟೆಗೆ ಬಂದು ಅತ್ಯಂತ ಯಶಸ್ಸು ಕಂಡಿತ್ತು. ಹೂಡಿಕೆದಾರರಿಗೆ ಸಾಕಷ್ಟು ಲಾಭವೂ ಆಗಿತ್ತು.
ಟಾಟಾ ಸಮೂಹ ಸಂಸ್ಥೆಯ ಮತ್ತೊಂದು ಗರಿಯೆನಿಸಿರುವ ಟಾಟಾ ಕ್ಯಾಪಿಟಲ್‌ನ ಐಪಿಒ ಹೊರ ತರುವ ಸಿದ್ದತೆಗಳು ಈಗಾಗಲೇ ಆರಂಭಗೊಂಡಿವೆ.
ಈ ಸಂಸ್ಥೆಯಲ್ಲಿ ಮಾತೃಸಂಸ್ಧೆಯಾಗಿರುವ ಟಾಟಾ ಸನ್ಸ್ ಶೇ. ೯೫ರಷ್ಟು ಹೂಡಿಕೆಯನ್ನು ಹೊಂದಿದೆ.
ಎಲ್ಲವೂ ನಿಗದಿತ ಯೋಜನೆಯಂತೆ ನಡೆದರೆ ವರ್ಷದೊಳಗೆ ಟಾಟಾ ಕ್ಯಾಪಿಟಲ್ ಷೇರು ಮಾರುಕಟ್ಟೆಯ ಬಾಗಿಲು ತಟ್ಟಲಿದೆ. ಹೂಡಿಕೆದಾರರ ಪಾಲಿಗಂತೂ ಇದು ಅತ್ಯುತ್ತಮ ಅವಕಾಶವನ್ನು ತೆರೆದುಕೊಡಲಿದೆ.
ಇಶ್ಯೂ ಗಾತ್ರ, ಬೆಲೆ ಎಲ್ಲ ವಿಚಾರಗಳೆಲ್ಲವೂ ಇನ್ನಷ್ಟೇ ನಿರ್ಧಾರವಾಗಬೇಕಿದೆ.
ಅದರೆ ಒಂದು ಮಾತು-
ಅನ್ ಲಿಸ್ಟೆಡ್ ಮಾರುಕಟ್ಟೆಯಲ್ಲಿ
ಸದ್ಯದ ದರ ೧೧೦೦ ರೂ.
ಕನಿಷ್ಠ ದರ ೪೫೦ ರೂ.