7 rupees

News @ your fingertips

ಮಾರುಕಟ್ಟೆಗೆ ‘ನೆಗಟಿವ್’ ಹೊಡೆತ, ಅಮೆರಿಕನ್ ದತ್ತಾಂಶಗಳು

ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್‌ನ ಬಡ್ಡಿದರ ಕುರಿತಂತೆ ಎಪ್ರಿಲ್ 30ರಂದು ನಡೆಯುವ ಸಭೆಯ ಮುನ್ನವೇ ಹೊರ ಬಿದ್ದ ಕೆಲವು ದತ್ತಾಂಶಗಳು ಷೇರು ಮಾರುಕಟ್ಟೆಯಲ್ಲಿ ಅಲ್ಪ ಮಟ್ಟಿನ ನಿರಾಶೆ ಮೂಡಿಸಿದೆ.
ಈ ಅಂಕಿ- ಅಂಶಗಳು ನೆಗಟಿವ್ ಆಗಿರುವ ಪರಿಣಾಮವೇ ಭಾರತದ ಷೇರು ಮಾರುಕಟ್ಟೆ ಮಂಗಳವಾರ ಅಂತಿಮ ಅವಧಿಯಲ್ಲಿ ಏಕಾಏಕಿ ಕುಸಿತಕ್ಕೆ ಕಾರಣವಾಯಿತು.
ಬೆಳಗ್ಗೆ ಪಾಸಿಟಿವ್ ಮೂಡ್‌ನಲ್ಲಿದ್ದ ಮಾರುಕಟ್ಟೆ ದಿನವಿಡಿ ಭಾರಿ ಪ್ರಮಾಣದಲ್ಲಿ ಏರಿಳಿತ ಕಂಡಿತು.ಒಂದು ಹಂತದಲ್ಲಿ ಬ್ಯಾಂಕ್ ನಿಫ್ಟಿ 50 ಸಾವಿರ ದಾಟುವ ತವಕದಲ್ಲಿತ್ತು. ಇದಾದ ಬಳಿಕ ಅಂತ್ಯದ ಹೊತ್ತಿಗೆ ಏಕಾಏಕಿ ಕುಸಿತ ಕಾಣಲಾರಂಭಿಸಿತು. ಇದಕ್ಕೆ ಕಾರಣ ಅಗಷ್ಟೇ ಹೊರ ಬಿದ್ದ ಅಮೆರಿಕದ ವೇತನ ಅಂಕಿ-ಅಂಶಗಳು. ಬೆಳಗ್ಗೆಯಿಂದಲೇ ಈ ಕುರಿತ ಸೂಚನೆಗಳಿದ್ದ ಕಾರಣ ಮಾರುಕಟ್ಟೆ ಅತ್ಯಂತ ಏರಿಳಿತ ಕಾಣುತ್ತಿತ್ತು.
ನಿರೀಕ್ಷೆ ಮೀರಿದ ಈ ದತ್ತಾಂಶಗಳು ಅಮೆರಿಕದಲ್ಲಿ ಹಣದುಬ್ಬರ ಹೆಚ್ಚಳದ ಸೂಚನೆಗಳನ್ನು ನೀಡುತ್ತಿವೆ.
ನಾಳೆ ಕಾರ್ಮಿಕ ದಿನಾಚರಣೆ ಪ್ರಯುಕ್ತ ಮಾರುಕಟ್ಟೆಗೆ ರಜೆ. ಫೆಡರಲ್ ರಿಸರ್ವ್ ಬ್ಯಾಂಕ್ ಎರಡು ದಿನಗಳ ಸಭೆಯ ಬಳಿಕ ನಿರ್ಧಾರಗಳು ಪ್ರಕಟವಾಗಲಿದೆ. ಈ ಎಲ್ಲ ಅಂಶಗಳು ಗುರುವಾರ ಮಾರುಕಟ್ಟೆ ಆರಂಭದ ಹೊತ್ತಿಗೆ ನೆಗೆಟಿವ್ ಪ್ರಭಾವ ಬೀರುವ ಎಲ್ಲ ಸಾಧ್ಯತೆಗಳಿವೆ. ಜೊತೆಯಲ್ಲಿ ಅವಂದಿನ ವಹಿವಾಟು ಸಾಕಷ್ಟು ಏರಿಳಿತಗಳಿಂದ ಕೂಡಿರುವ ಸಂಭವಗಳೇ ಜಾಸ್ತಿ.ಹಾಗಾಗಿ ಎಚ್ಚರಿಕೆ ನಡೆ ಅಗತ್ಯ.